ಜಿಲ್ಲೆ

ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ

Uttara Kannada - Subash Hegde

ಕುಮಟಾ: ರಾಷ್ಟ್ರೀಯ ಹೆದ್ದಾರಿ 766 ಇ ದಲ್ಲಿ ಕುಮಟಾ-ಶಿರಸಿ ನಡುವೆ ದೇವಿಮನೆ ಸಮೀಪ ಮತ್ತೆ ಗುಡ್ಡ ಕುಸಿತ ಉಂಟಾಗಿದ್ದು, ವಾಹನ ಸಂಚಾರ‌ ಸ್ಥಗಿತಗೊಂಡಿದೆ.

ಶುಕ್ರವಾರ ರಾತ್ರಿ ಗುಡ್ಡ ಕುಸಿತ ಉಂಟಾಗಿತ್ತು. ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.‌

ಒಂದೇ ದಿನದಲ್ಲಿ ಮತ್ತಷ್ಟು ಮಣ್ಣು ಬಿದ್ದಿದೆ. ಘಟ್ಟದ ವಿವಿಧೆಡೆ ಇನ್ನಷ್ಟು ಗುಡ್ಡ ಕುಸಿಯುವ ಆತಂಕವಿದೆ.