ಕಾರವಾರ: ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ಹಾಸನ ಸಮೀಪ ಮತ್ತೆ ಭೂ ಕುಸಿತವಾಗಿದ್ದು, ಕಾರವಾರ-ಬೆಂಗಳೂರು ರೈಲು ಮಾರ್ಗ ಮಧ್ಯೆ ನಿಂತಿದೆ.
ಇದೇ ತಿಂಗಳಲ್ಲಿ ಮೂರನೆ ಬಾರಿ ಭೂ ಕುಸಿತ ಸಂಭವಿಸಿದೆ.ಯಶವಂತಪುರ ಕಾರವಾರ ಶುಕ್ರವಾರ ಬೆಳಗಿನ ರೈಲು ಮಾರ್ಗ ಮಧ್ಯದಲ್ಲೇ ನಿಂತಿದೆ.
ಆ.16 ರ ಯಶವಂತಪುರ- ಕಾರವಾರ ಎಕ್ಸ್ ಪ್ರೆಸ್ ( 16515), ಆ.17 ರ ಕಾರವಾರ-ಯಶವಂತಪುರ ಎಕ್ಸ್ ಪ್ರೆಸ್ , ಆ
16 ರ - ಬೆಂಗಳೂರು- ಮುರ್ಡೇಶ್ವರ (16585) ಹಾಗೂ ಮುರ್ಡೇಶ್ವರ-ಬೆಂಗಳೂರು( 16586) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.