ಜಿಲ್ಲೆ

ಜಮೀನುಗಳಿಗೆ ಹೋಗುವ ರಸ್ತೆ ಒತ್ತುವರಿ: ಮತ್ಸಮುದ್ರ ಗ್ರಾಮಸ್ಥರಿಂದ ತಹಸೀಲ್ದಾರ್‌ಗೆ ಮನವಿ

ಚಳ್ಳಕೆರೆ: ತಾಲೂಕಿನ ಮತ್ಸಮುದ್ರ ಗ್ರಾಮದ ದಕ್ಷಿಣ ಭಾಗದ ರೈತರ ಜಮೀನುಗಳಿಗೆ ಹೋಗುವ ಹಳೆಯ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು.

ರೈತರಿಗೆ ತೀವ್ರ ತೊಂದರೆ

ಒತ್ತುವರಿದಾರರಿಂದಾಗಿ ರೈತರಿಗೆ ತೀವ್ರ ತೊಂದರೆಯಾಗಿದ್ದು, ಬಿತ್ತನೆ ಸಮಯದಲ್ಲಿ ರೈತರು ಮತ್ತು ಜಾನುವಾರುಗಳಿಗೆ ಓಡಾಡಲು ಅಡಚಣೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಒತ್ತುವರಿದಾರರು ಗಲಾಟೆ ಮಾಡುತ್ತಾರೆ ಎಂದು ಗ್ರಾಮಸ್ಥರು ದೂರಿದರು.

ಈ ಹಿಂದೆಯೂ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಿಸಿದವರು ಕ್ರಮ ಕೈಗೊಂಡು ಒತ್ತುವರಿ ಮಾಡಿರುವ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಚ್. ಆಂಜನೇಯ, ಎಂ.ಪಿ. ಪುಟ್ಟಣ್ಣ, ಎ.ಜಿ. ತಿಮ್ಮಣ್ಣ, ಎಸ್. ಹನುಮಂತರಾಯ, ಅಜ್ಜಯ್ಯ, ಲಕ್ಷ್ಮಣ್, ಈರಣ್ಣ, ಹನುಮಂತಪ್ಪ, ಏಕಾಂತಪ್ಪ, ಸಿ. ತಿಪ್ಪೇಸ್ವಾಮಿ, ಜಯಣ್ಣ, ಶಿವಣ್ಣ, ಆರ್.ಎ. ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.