ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ಖಂಡಿಸಿ ರಾಯಚೂರು ಹೊರವಲಯದ ಸಾಥ್‌ಮೈಲ್ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ರೈತ ಸಂಘದಿಂದ ಶನಿವಾರ ಸಂಚಾರ ತಡೆ ನಡೆಸಲಾಯಿತು. 
ಜಿಲ್ಲೆ

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ರೈತ ಸಂಘದಿಂದ ರಾಯಚೂರಲ್ಲಿ ಹೆದ್ದಾರಿ ಸಂಚಾರ ತಡೆ, ವಾಹನ ಸಂಚಾರಕ್ಕೆ ತೊಂದರೆ

ರಾಯಚೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ಖಂಡಿಸಿ ನಗರದ ಹೊರವಲಯದ ಸಾಥ್‌ಮೈಲ್ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಶನಿವಾರ ಸಂಚಾರ ನಡೆಸಿದರು.

ರಾಜ್ಯ ಸರ್ಕಾರ ಕಾಯ್ದೆ ಜಾರಿಗೊಳಿಸುವ ಮೂಲಕ ರೈತರನ್ನು ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸಿ, ಶ್ರೀಮಂತರ ಕೈಗೆ ಕೃಷಿ ಭೂಮಿ ನೀಡಲು ಮುಂದಾಗಿದೆ. ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಭೂಮಿ ಖರೀದಿಸಿದರೆ ರೈತರು ತಮ್ಮ ಭೂಮಿಯಲ್ಲೇ ಕೂಲಿ ಕಾರ್ಮಿಕರಾಗಬೇಕಾಗುತ್ತದೆ.

ಕೃಷಿಗೆ ಉತ್ತೇಜನ ನೀಡುವುದಾಗಿ ಹೇಳುವ ರಾಜ್ಯ ಸರ್ಕಾರ ಕೃಷಿಯನ್ನು ಲಾಭದಾಯಕವಾಗಿ ಮಾಡುವ ಬದಲು ರೈತರು ಕೃಷಿಯನ್ನು ಬಿಟ್ಟು ಹೋಗುವ ಸ್ಥಿತಿಯನ್ನು ಕಾಯ್ದೆ ಮೂಲಕ ನಿರ್ಮಾಣ ಮಾಡಲು ಹೊರಟಿವೆ. ಈಗಾಗಲೇ ಸರ್ಕಾರ ವಿವಿಧ ಯೋಜನೆಗಳ ಹೆಸರಿನಲ್ಲಿ ನೂರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಬೀಳು ಬಿಟ್ಟಿದೆ ಎಂದು ರೈತರು ದೂರಿದರು.

ಸಂಘದ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ, ಪದಾಧಿಕಾರಿಗಳಾದ ಶಿವಪ್ಪ ಆಲ್ಕೂರು, ರಾಮಬಾಬು, ನರಸಪ್ಪ, ನಿಂಗಪ್ಪ, ಮರಿದೇವ, ನರಸಿಂಹ, ಭೀಮರೆಡ್ಡಿ, ಈರಣ್ಣ, ಬಾನುಬೀ, ಅನಿತಾ, ಶಂಕರ್ ಹಾಗೂ ರೈತರು ಪಾಲ್ಗೊಂಡಿದ್ದರು.