ಜಿಲ್ಲೆ

ಭೂಮಿ ಹಿಂಪಡೆದು ಕಿತ್ತೂರು ಉತ್ಸವ ಆಚರಿಸಿ

ಚನ್ನಮ್ಮನ ಕಿತ್ತೂರು: ದೇಶಪ್ರೇಮಿ ರಾಯಣ್ಣನ್ನು ಹಿಡಿದು ಕೊಟ್ಟ ದ್ರೋಹಿಗಳಿಗೆ ಬ್ರಿಟಿಷ್​ ಕಾನೂನು ಕೊಟ್ಟ ಇನಾಮಕಿ 11 ಸಾವಿರ ಎಕರೆ ಭೂಮಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂ ಹಸಿರು ಸೇನೆ ಹಾಗೂ ಕುಲವಳ್ಳಿ ರೈತರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂ ಹಸಿರು ಸೇನೆ ಅಧ್ಯ ಚೂನಪ್ಪ ಪೂಜೇರಿ ಮಾತನಾಡಿ, ಕ್ರಾಂತಿವೀರ ರಾಯಣ್ಣನನ್ನು ಕೊಲೆ ಮಾಡಿಸಿದ ಕೊಲೆಗಡುಕ ವಂಶಸ್ಥರಿಗೆ ದೇಶ ದ್ರೋಹಿಗಳು ನೀಡಿದ 11 ಸಾವಿರ ಎಕರೆ ಭೂಮಿ ಹಕ್ಕನ್ನು ರದ್ದುಪಡಿಸಬೇಕು. ಯಾವ ಮಹಾನ್​ ಕೆಲಸಕ್ಕೆ ಈ ಬಹುಮಾನ ನೀಡಿದ್ದಾರೆಂದು ಅರಿತು ಹಲವಾರು ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ಬಡ ರೈತರಿಗೆ ಹಕ್ಕುಪತ್ರ ನೀಡಿ ಕಿತ್ತೂರು ಉತ್ಸವ ಆಚರಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡ ಬಿಷ್ಠಪ್ಪ ಶಿಂಧೆೆ ಮಾತನಾಡಿ, ಬ್ರಿಟಿಷರ ಗುಲಾಮಗಿರಿ ಮಾಡಿ ಕ್ರಾಂತಿವೀರ ರಾಯಣ್ಣನನ್ನು ಹಿಡಿದುಕೊಟ್ಟ ದ್ರೋಹಿಗಳಿಗೆ ಬ್ರಿಟಿಷ್​

ಕಾನೂನು ನೀಡಿದ ಭೂಮಿ ಇದು. ಸರ್ಕಾರ ಕೂಡಲೇ ರೈತ ಕುಟುಂಬಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ನಾಗಪ್ಪ ಹಲಸನವರ, ಅರ್ಜುನ ಮಡಿವಾಳರ, ಮಹಾಂತೇಶ ಯಮ್ಮಿ, ವಿಠ್ಠಲ ಹಟ್ಟಿಹೊಳಿ, ಹುಸೇನ್​ ದೊಡ್ಡಮನಿ, ದೇವೇಂದ್ರ ದೊಡ್ಡನಾಯ್ಕರ, ಪ್ರಕಾಶ ನಾಯಕ, ಕೇದಾರಿ ಸಾಳವಂಕಿ, ನಾಗರತ್ನಾ ಪಾಟೀಲ, ರೇಣುಕಾ ಸಾಳವಂಕಿ ಇತರರಿದ್ದರು.