ಅಮೀನಗಡದಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿ ರಾಜಕುಮಾರ ಮತ್ತು ಮಸ್ಕಿ ತಹಸೀಲ್ದಾರ್ ಮಲ್ಲಪ್ಪ ಯರಗೋಳ ರೈತರ ಸಭೆ ನಡೆಸಿದರು. ಮಸ್ಕಿ ತಹಸೀಲ್ದಾರ್ ಮಲ್ಲಪ್ಪ ಯರಗೋಳ, ರೈತರಾದ ಹನುಮಂತರಡ್ಡಿ ನಾಯಕ, ಹುಚ್ಚರಡ್ಡಿ ಹಡಪದ, ಹುಚ್ಚರಡ್ಡಿ ನಾಯಕ, ಹುಚ್ಚಣ್ಣ ಗುಡಗುಂಟಿ, ಖಾಜಸಾಬ್, ಅಶೋಕ ಅಗಸರ, ಯಲ್ಲಪ್ಪ, ಭೀಮಣ್ಣ ಕುರಬರ ಇತರರಿದ್ದರು. 
ಜಿಲ್ಲೆ

ಭೂಮಿಗೆ ನ್ಯಾಯಯುತ ಪರಿಹಾರ ನೀಡಿ

ನರೇಶ್ ಕುಮಾರ್

ಕವಿತಾಳ: ಭಾರತ ಮಾಲಾ ರಾಷ್ಟ್ರಿಯ ಹೆದ್ದಾರಿಗೆ ಸಂಬಂಧಿಸಿ ಅಮೀನಗಡ ಗ್ರಾಮದ ಯಲ್ಲಮ್ಮ ಗುಡ್ಡದ ಬಳಿ ವಿವಿಧ ಹಳ್ಳಿಗಳ ರೈತರೊಂದಿಗೆ ವಿಶೇಷ ಭೂಸ್ವಾಧಿನಾಧಿಕಾರಿ ರಾಜಕುಮಾರ ಮತ್ತು ಮಸ್ಕಿ ತಹಸೀಲ್ದಾರ್ ಮಲ್ಲಪ್ಪ ಯರಗೋಳ ಅವರು ಗುರುವಾರ ಸಭೆ ನಡೆಸಿದರು.

ಎಕರೆಗೆ ಕೇವಲ ಮೂರು ಲಕ್ಷ ರೂ. ನೀಡುತ್ತಿರುವುದು ಖಂಡನೀಯ. ಅಲ್ಲದೆ ಶಫೀ ಎನ್ನುವ ರೈತನ ಎರಡು ಎಕರೆ ಭೂಮಿ ಪಡೆದು ಬರೀ ಒಂದು ಎಕರೆಗೆ ಪರಿಹಾರ ನೀಡಲಾಗಿದೆ. ಆದ್ದರಿಂದ ನ್ಯಾಯಯುತವಾದ ಬೆಲೆ ನೀಡುವವರೆಗೆ ಭಾರತ ಮಾಲಾ ರಾಷ್ಟ್ರಿಯ ಹೆದ್ದಾರಿಗಾಗಿ ನಮ್ಮ ಭೂಮಿ ನೀಡುವುದಿಲ್ಲ. ಎಕರೆಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಈಗಿರುವ ರಸ್ತೆಗಳ ಸಂಪರ್ಕವನ್ನು ಬಂದ್ ಮಾಡಬಾರದೆಂದು ವಟಗಲ್, ಕೊಟೆಕಲ್, ಅಮೀನಗಡ ಗ್ರಾಮದ ರೈತರು ಒತ್ತಾಯಿಸಿದರು.

ತಹಸೀಲ್ದಾರ್ ಮಲ್ಲಪ್ಪ ಯರಗೋಳ ಮಾತನಾಡಿ, ನಿಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಮಾ.10ರಂದು ಡಿಸಿ ಅವರನ್ನು ಭೇಟಿಯಾಗಿ ಮನವರಿಕೆ ಮಾಡೋಣ. ಅಂದು ಎಲ್ಲ ರೈತರು ಆಗಮಿಸಬೇಕೆಂದು ತಿಳಿಸಿದರು.