filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 38; 
ಜಿಲ್ಲೆ

ಮುಳ್ಳೂರು ಗ್ರಾಮದ ಜಮೀನು ಜಲಾವೃತ

ಕೊಳ್ಳೇಗಾಲ: ಕಳೆದ ಎರಡ್ಮೂರು ದಿನಗಳಿಂದ ಸುರಿದ ಅಧಿಕ ಮಳೆಗೆ ಮುಳ್ಳೂರು ಗ್ರಾಮದ 200ಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತವಾಗಿದ್ದು, ಅನ್ನದಾತರು ಸಂಕಷ್ಟಕ್ಕೀಡಾಗಿದ್ದಾರೆ.

ಕಬ್ಬು, ತರಕಾರಿ, ಸೊಪ್ಪು ಬೆಳೆಗಳು ಸೇರಿದಂತೆ ಬಹುಪಾಲು ಭತ್ತದ ಬೆಳೆಗಳು ನೀರಿನಲ್ಲಿ ಮುಳುಗಡೆಗೊಂಡಿದ್ದು, ರೈತರು ಜಮೀನಿಗೆ ತೆರಳಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುತ್ತಿಲ್ಲ.

ಮುಳ್ಳೂರು ಗ್ರಾ.ಪಂ ಕೂಗಳತೆ ದೂರದಲ್ಲಿರುವ ಬೆಳಬಾಗಿಲು ಕಾಲುವೆ ಸಂಪೂರ್ಣ ಹೂಳಿನಿಂದ ಭತ್ತಿಯಾದ ಪರಿಣಾಮ ಜಮೀನಿನಲ್ಲಿ ನಿಂತಿರುವ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಮಳೆಗಾಲಕ್ಕೂ ಮೊದಲು ಕಾಲುವೆಗಳ ಸ್ವಚ್ಛತೆ ನಡೆಸಿದ್ದರೆ ನೀರಿನಿಂದ ರೈತರಿಗೆ ತೊಂದರೆ ಎದುರಾಗುತ್ತಿಲಿಲ್ಲ. ನೀರಾವರಿ ಇಲಾಖೆಯ ವೈಫಲ್ಯವೇ ಇದಕ್ಕೆ ಕಾರಣ ಎಂದು ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಫಸಲು ಹಾನಿಗೊಳಗಾಗುವ ಆತಂಕ:

ರಾತ್ರಿ ಅಧಿಕ ಮಳೆಯಾಗಿ 200ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ನೀರು ನಿಂತಿದೆ. ಭತ್ತದ ಫಸಲು ಮುಳುಗಿದೆ. ಐದಾರು ದಿನ ನೀರು ಜಮೀನಿನಲ್ಲಿ ಉಳಿದರೆ ಭತ್ತದ ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತದೆ. ತರಕಾರಿ ಬೆಳೆಗಳು ನಾಶವಾಗುತ್ತದೆ ಎಂಬುದು ರೈತರ ಆತಂಕವಾಗಿದೆ.

ಪ್ರವಾಹದಿಂದಲೂ ನಷ್ಟಕ್ಕೆ ಸಿಲುಕಿದ್ದ ರೈತರು :

ಆಗಸ್ಟ್ ತಿಂಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಕಾವೇರಿ ಪ್ರವಾಹ ಹರಿದು ಮುಳ್ಳೂರು ಗ್ರಾಮದ ನೂರಾರು ಎಕರೆ ಜಮೀನು ಜಲಾವೃತಗೊಂಡು ಭತ್ತ, ತರಕಾರಿ ಬೆಳೆಗಳಿಗೆ ಹಾನಿಗೊಳಗಾಗಿ ರೈತರು ನಷ್ಟ ಅನುಭವಿಸಬೇಕಾಯಿತು. ಆದರೀಗ ಹೆಚ್ಚಿನ ಮಳೆಯಿಂದ ಮತ್ತೆ ಜಮೀನುಗಳು ಜಲಾವೃತಗೊಂಡಿದೆ.