ಜಿಲ್ಲೆ

ಭೂ ಮಂಜೂರಾತಿ ಸಭೆಯಲ್ಲಿ ಆದೇಶ ಹೊರಡಿಸಿ

ಅಶೋಕ್ ಕುಮಾರ್ ಎನ್

ಸಿಂಧನೂರು: ಮಸ್ಕಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡದಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ಭಾನುವಾರ ಮನವಿ ಸಲ್ಲಿಸಿತು.

ಭೂ ಮಂಜೂರಾತಿಗಾಗಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ ಹಾಗೂ ತಹಸಿಲ್ ಕಚೇರಿ ಮುಂದೆ ಅನೇಕ ಸುತ್ತಿನ ಹೋರಾಟ ನಡೆಸಲಾಗಿದ್ದರೂ ಬೇಡಿಕೆ ಈಡೇರಿಲ್ಲ. ಮಸ್ಕಿ ತಹಸಿಲ್ ಕಚೇರಿಯಲ್ಲಿ ಸೋಮವಾರ ನಡೆಯುವ ಭೂ ಮಂಜಾರಾತಿ ಸಭೆಯಲ್ಲಿ ಭೂ ಮಂಜೂರಾತಿ ಕಾರ್ಯ ಅಂತಿಮಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಯಮನೂರಪ್ಪ, ಛತ್ರಗೌಡ, ಗಿಡ್ಡಪ್ಪ, ರತ್ನಾಪುರ ಹಟ್ಟಿ, ಬೊಮ್ಮನಾಳ, ಗಂಟೇರ ಹಟ್ಟಿ ರೈತರು ಇದ್ದರು.