ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯದ ಪದಾಧಿಕಾರಿಗಳು ಸುಳ್ಯ ತಹಸೀಲ್ದಾರ್ ಮಂಜುನಾಥ್‌ಗೆ ಮನವಿ ಸಲ್ಲಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಕಾರ್ಯದರ್ಶಿ ಭರತ್ ಕುಮಾರ್, ಮಾಧವ ಗೌಡ ಸುಳ್ಯಕೋಡಿ, ಮಂಜುನಾಥ್ ಮಡ್ತಿಲ ಇದ್ದರು. 
ಜಿಲ್ಲೆ

ರೈತರಿಂದ ತಹಸೀಲ್ದಾರ್‌ಗೆ ಮನವಿ: ಅರಣ್ಯ ಇಲಾಖೆಯಿಂದ ಜಾಗ ಅತಿಕ್ರಮಣ ದೂರು

ಸೌಮ್ಯ ಆರ್

ಸುಳ್ಯ: ತೊಡಿಕಾನ ಗ್ರಾಮದಲ್ಲಿ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಸರ್ವೇ ನಡೆಸಿ ರೈತರ ಜಾಗ ಅತಿಕ್ರಮಿಸುವ ಕುರಿತು ಕರ್ನಾಟಕ ರೈತ ಸಂಘ ಸುಳ್ಯದ ಪದಾಧಿಕಾರಿಗಳು ಸುಳ್ಯ ತಹಸೀಲ್ದಾರ್ ಮಂಜುನಾಥ್‌ಗೆ ಮನವಿ ಸಲ್ಲಿಸಿದರು.

ಅರಣ್ಯ ಇಲಾಖೆ ರೈತರಿಗೆ ನೋಟಿಸ್ ನೀಡದೆ ತಾಲೂಕು ಕಂದಾಯ ಇಲಾಖೆಯ ಅನುಮತಿ ಪಡೆಯದೆ ಈಗಾಗಲೇ ಮಂಜೂರಾಗಿ 20 ವರ್ಷ ಕಳೆದ ಹಕ್ಕುಪತ್ರ ಅಸಿಂಧುವೆಂದು ಪರಿಗಣಿಸಿದ ಬಗ್ಗೆ ತಹಸೀಲ್ದಾರ್‌ಗೆ ತಿಳಿಸಲಾಯಿತು.

ತಹಸೀಲ್ದಾರ್ ಮಂಜುನಾಥ್ ಮನವಿ ಸ್ವೀಕರಿಸಿ ಜಂಟಿ ಸರ್ವೇ ನಡೆಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಕಾರ್ಯದರ್ಶಿ ಭರತ್ ಕುಮಾರ್, ಮಾಧವ ಗೌಡ ಸುಳ್ಯಕೋಡಿ, ಮಂಜುನಾಥ್ ಮಡ್ತಿಲ, ದ.ಕ.ಸಂಪಾಜೆ ಅಧ್ಯಕ್ಷ ವಸಂತ ಪೆಲತ್ತಡ್ಕ, ಸುರೇಶ್ ಭಟ್ ಕೊಜಂಬೆ, ಅಮರನಾಥ್ ಆಳ್ವ ಇದ್ದರು.