ಹಾವೇರಿ: ಜಮೀನಿನ ಮೇಲೆ ಮಾಡಿದ ಸಾಲ ತೀರಿಸಲಾಗದೆ ವ್ಯಕ್ತಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವಗಿರಿ ಗ್ರಾಮದಲ್ಲಿ ನಡೆದಿದೆ.
ಸವಣೂರ ತಾಲೂಕಿನ ಚವಡಾಳ ಗ್ರಾಮದ ಸಿದ್ದಪ್ಪ ದೊಡ್ಡನಿಂಗಪ್ಪ ಯಲವಿಗಿ (28) ಮೃತ ವ್ಯಕ್ತಿ.
ಈತ ಜಮೀನಿನ ಮೇಲೆ ಮಾಡಿರುವ ಸಾಲ ತೀರಿಸಲಾಗದೆ ಚಿಂತೆ ಮಾಡುತ್ತ ಬಂದು ದೇವಗಿರಿ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.