ಜಿಲ್ಲೆ

ಭೂಮಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

Belagavi

ಬೆಳಗಾವಿ: ಜಗತ್ತು ಒಂದರ ಮೇಲೊಂದು ಅವಲಂಬಿತವಾಗಿದೆ. ಭೂಮಿ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಸುರೇಶ ಅಂಗಡಿ ಹೇಳಿದರು.

ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜನಿಯರಿಂಗ್ ವಿಭಾಗದಿಂದ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಡಾ. ಸ್ಫೂರ್ತಿ ಪಾಟೀಲ ಮಾತನಾಡಿದರು.

ಕಾಲೇಜಿನ ವೇಸ್ಟ್ ವಾಟರ್ ಮ್ಯಾನೇಜ್‌ಮೆಂಟ್, ಹೆಲ್ತ್ ಸೇಫ್ಟಿ ಇಂಜನಿಯರಿಂಗ್ ಮುಖ್ಯಸ್ಥ ಡಾ. ಬಿ.ಟಿ.ಸುರೇಶಬಾಬು, ಸಂಸ್ಥೆಯ ಉಪಾಧ್ಯಕ್ಷೆ ಮಂಗಲಾ ಅಂಗಡಿ, ಶ್ರದ್ಧಾ ಶೆಟ್ಟರ್, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಡಾ. ಸಂಜಯ ಪೂಜಾರಿ, ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಸಂಗೀತಾ ದೇಸಾಯಿ, ಅಂಗಡಿ ಇಂಟರ್‌ನ್ಯಾಷನಲ್ ಸ್ಕೂಲ್ ಮುಖ್ಯಾಧ್ಯಾಪಕಿ ಆಶಾ ರಜಪೂತ, ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಪ್ರಾಚಾರ್ಯ ಪ್ರೊ. ಎಚ್.ಎಸ್. ಪಾಟೀಲ, ಪ್ರೊ. ಅಮರ ಬ್ಯಾಕೋಡಿ, ಪ್ರೊ. ನೂರ್‌ಅಹ್ಮದ್ ಹೊಸಮನಿ, ದೈಹಿಕ ಶಿಕ್ಷಣ ನಿರ್ದೇಶಕ ವಿಶಾಂತ ದಮೋಣೆ ಇತರರಿದ್ದರು.

ನೀರು ಹಿತ-ಮಿತವಾಗಿ ಬಳಸಿ: ಬೆಳಗಾವಿಯ ವಿಜ್ಞಾನಿ ಡಾ. ಬಿ.ಕೆ. ಪುರಂದರ ವೆಬಿನಾರ ಮಾತನಾಡಿ ಕುಡಿಯುವ ನೀರು ಅತ್ಯಮೂಲ್ಯವಾದದ್ದು. ಅದನ್ನು ಹಿತ-ಮಿತವಾಗಿ ಬಳಕೆ ಮಾಡಬೇಕು. ಮಣ್ಣು ಹಾಗೂ ಅರಣ್ಯ ಸಂರಕ್ಷಣೆಯಿಂದ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ಸಕಲ ಜೀವರಾಶಿಗಳಿಗೂ ಒಳಿತಾಗುವುದು ಎಂದರು.