ಜಿಲ್ಲೆ

ಶಾಸಕ ರವಿಕುಮಾರ್‌ರಿಂದ ಮೂಡಿದ ಭರವಸೆ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯದರ್ಶಿ ಸಿದ್ದರಾಮು ಧನ್ಯವಾದ

ಮಂಡ್ಯ: ಭೂಮಿ ಸಮಸ್ಯೆಗಳಿಗೆ ಸಂಬಂಧಿಸಿದ ಬಡ ಜನರ ಹಕ್ಕೊತ್ತಾಯಗಳನ್ನು ವಸತಿ ಸಚಿವರ ಸಮ್ಮುಖದಲ್ಲಿ ಚರ್ಚಿಸುವುದರ ಜತೆಗೆ ರಾಜ್ಯಸರ್ಕಾರಕ್ಕೆ ತಲುಪಿಸಲು ಸಹಕರಿಸಿದ ಶಾಸಕ ರವಿಕುಮಾರ್ ಗಣಿಗ ಅವರಿಗೆ ವಸತಿ ರಹಿತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಇದರಿಂದ ನಮ್ಮ ಹೋರಾಟಕ್ಕೆ ಫಲ ಸಿಗುವ ಭರವಸೆ ಮೂಡಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಎಂ.ಸಿದ್ದರಾಮು ತಿಳಿಸಿದರು.

ಬಡ ಜನರ ಭೂಮಿ ಸಂಬಂಧಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಜನಶಕ್ತಿ, ಮಂಡ್ಯ ಜಿಲ್ಲಾ ಶ್ರಮಿಕ ನಗರ ವಾಸಿಗಳ ಒಕ್ಕೂಟ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಜಿಲ್ಲಾಡಳಿತ, ಶಾಸಕರು ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿ.ಡಿ ಕಾಲನಿಯ ಕೆರೆ ಅಂಗಳದಲ್ಲಿ ನಿರ್ಮಾಣವಾಗುತ್ತಿರುವ ವಸತಿಗಳನ್ನು ವಸತಿ ರಹಿತರಿಗೆ ವಿತರಣೆ ಮಾಡಲು ಮುಂದಾಗಿರುವ ಶಾಸಕರ ನಡೆ ಸ್ವಾಗತಾರ್ಹ. ಇದಲ್ಲದೆ ಹಕ್ಕುಪತ್ರ ವಂಚಿತರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ, 3 ತಿಂಗಳಲ್ಲಿ ಹಕ್ಕುಪತ್ರ ವಿತರಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನ, ಹಾಲಹಳ್ಳಿ ಸ್ಲಂ ಬೋರ್ಡ್‌ನಲ್ಲಿ 80 ಮನೆ ನಿರ್ಮಾನಕ್ಕೆ 2.50 ಕೋಟಿ ಮತ್ತು ಎರಡುವರೆ ಎಕರೆಯಲ್ಲಿ ನೂನತವಾಗಿ 500 ಮನೆನಿರ್ಮಾಣ ಮಾಡಲು ಕ್ರಮ ವಹಿಸುವುದು ಉತ್ತಮ ಬೆಳವಣಿಗೆ. ಅಂತೆಯೇ ನಗರದ ಮುಸ್ಲಿಂ ಬ್ಲಾಕ್, ಕಾಳಪ್ಪ ಬಡಾವಣೆ ಸೇರಿದಂತೆ ನಗರದ ಎಲ್ಲ ಸ್ಲಂಗಳ ಜಟಿಲ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ವಕೀಲ ಬಿ.ಟಿ.ವಿಶ್ವನಾಥ್, ನಗರಕೆರೆ ಜಗದೀಶ್, ಶಿವಣ್ಣ, ಲಿಂಗಮ್ಮ, ಲತಾ, ವಿಜಯ್, ರವಿ, ದೊರೆ ಇದ್ದರು.