ಜಿಲ್ಲೆ

ಸಹಕಾರ ಸಂಘದ ಆಶಯ ಈಡೇರಲಿ

ಕಳಸ: ಹೊರನಾಡು ಗ್ರಾಮದಲ್ಲಿ ಲ್ಯಾಂಪ್ಸ್ ಸಹಕಾರ ಸಂಘದ ಕಟ್ಟಡದ ಉದ್ಘಾಟನೆಯನ್ನು ಹೊರನಾಡು ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೆಶ್ವರ ಜೋಷಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಹಕಾರ ಸಂಘದ ಮೂಲ ಉದ್ದೇಶ ಅರಣ್ಯ ಉತ್ಪನ್ನ ಸಂಗ್ರಹಿಸುವುದು. ಹೊರನಾಡಿನ ಈ ಘಟಕವು ಅಂತಹ ಉತ್ಪನ್ನಗಳ ಸಂಗ್ರಹದಲ್ಲಿ ಮಾದರಿಯಾಗಲಿ ಎಂದರು.

ಈವರೆಗೆ ಹೊರನಾಡು ಗ್ರಾಪಂ ಕಟ್ಟಡದಲ್ಲಿ ನಡೆಯುತ್ತಿದ್ದ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ಹೊಂದಲು ನಿವೇಶನ ನೀಡುವುದಾಗಿ ಈ ಹಿಂದೆ ಭೀಮೇಶ್ವರ ಜೋಷಿ ವಾಗ್ದಾನ ಮಾಡಿದ್ದರು. ಅದರಂತೆ ಸಂಘಕ್ಕೆ 1200 ಚ. ಅಡಿಯ ನಿವೇಶನ ನೀಡಿದ್ದರು. ರಾಜ್ಯ ಸರ್ಕಾರದ 25 ಲಕ್ಷ ರೂ. ಅನುದಾನದಲ್ಲಿ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ವಿುಸಲಾಗಿದೆ.

ಲ್ಯಾಂಪ್ಸ್ ಅಧ್ಯಕ್ಷ ಸತೀಶ್, ನಿರ್ದೇಶಕರಾದ ಯಶೋದಾ, ರಜನಿ, ಸುಂದರ್​ಕುಮಾರ್, ವಸಂತ, ಮುತ್ತಪ್ಪ, ರಾಮು, ಅರಿಂಜಯ ಇದ್ದರು.