ಜಿಲ್ಲೆ

ಸಂಡೂರಿನ ಕಲಾ ಕೇಂದ್ರ ಹಿರಿಮೆ ವಿಶ್ವವ್ಯಾಪಿ

ಜಿ- ೨೦ ಸಭೆ: ಗಿನ್ನಿಸ್ ದಾಖಲೆ ಬರೆಯಲಿದೆ ಲಂಬಾಣಿ ವಸ್ತç ಪ್ರದರ್ಶನ

ಹೊಸಪೇಟೆ: ಮಹಿಳೆಯರಿಗೆ ಉದ್ಯೋಗ ಸೃಷ್ಟಿ, ಲಂಬಾಣಿ ವಸ್ತç ವಿನ್ಯಾಸದ ಮೂಲಕ ರಾಜ್ಯದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಸಂಡೂರು ಕುಶಲಾ ಕಲಾ ಕೇಂದ್ರ ಇದೀಗ ಜಿ- ೨೦ ಶೃಂಗದಲ್ಲಿ ಗಮನ ಸೆಳೆಯಲಿದೆ. ಹಂಪಿಯಲ್ಲಿ ಆಯೋಜಿಸಿರುವ ಜಿ- ೨೦ ಶೃಂಗಸಭೆಯಲ್ಲಿ ಲಂಬಾಣಿ ಸಾಂಪ್ರದಾಯಿಕ ವಸ್ತçಗಳ ಪ್ರದರ್ಶನ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಲಿದೆ. ಈ ಮೂಲಕ ಸಂಡೂರಿನ ಮಹಿಳೆಯರ ಹಿರಿಮೆ ವಿಶ್ವವ್ಯಾಪ್ತಿ ಪಸರಿಸಲಿದೆ.

ಬುಡಕಟ್ಟು ಸಮುದಾಯಗಳಲ್ಲಿ ಲಂಬಾಣಿಯೂ ಒಂದು. ಲಂಬಾಣಿ ಸಮುದಾಯದವರು ತಮ್ಮದೇ ಆದ ಭಾಷೆ, ಪೋಷಾಕಿನಿಂದ ಗಮನ ಸೆಳೆಯುತ್ತಾರೆ. ತಿಳಿಗೆಂಪು ಬಣ್ಣದ ವಸ್ತçದಲ್ಲಿ ವಿವಿಧ ಆಕಾರದ ಕನ್ನಡಿಯ ತುಂಡುಗಳನ್ನು ಜೋಡಿಸುವುದರಿಂದ ಲಂಬಾಣಿ ಮಹಿಳೆಯರ ಉಡುಗೆಗಳು ವಿಶಿಷ್ಟ ಎನಿಸುತ್ತವೆ.

ಆದರೆ, ಇತ್ತೀಚಿಗೆ ಆಧುನಿಕತೆ ಭರಾಟೆಯಲ್ಲಿ ಸಾಂಪ್ರದಾಯಿಕ ಲಂಬಾಣಿ ಉಡುಗೆಗಳು ಜನಮಾನಸದಿಂದ ಮರೆಯಾಗುತ್ತಿದ್ದು, ಹಬ್ಬ ಮತ್ತಿತರೆ ವಿಶೇಷ ದಿನಗಳಿಗೆ ಸೀಮಿತವಾಗುತ್ತಿವೆ. ಅಳಿವಿನತ್ತ ಸಾಗುತ್ತಿರುವ ಕಸೂತಿ ಕಲೆಯನ್ನು ಪೋಷನೆಯಲ್ಲಿ ತೊಡಗಿರುವ ಸಂಡೂರು ಕುಶಲಾ ಕಲಾ ಕೇಂದ್ರ ಇದೀಗ ವಿಶ್ವ  ದಾಖಲೆಯ ಮೂಲಕ ಜಗತ್ತಿನ ಗಮನ ಸೆಳೆಯುವತ್ತ ದಾಪುಗಾಲಿಡುತ್ತಿದೆ.

ಈ ಭಾಗದ ಮಹಿಳೆಯರಿಗೆ ದುಡಿಮೆಯನ್ನು ಒದಗಿಸುವ ಉದ್ದೇಶದಿಂದ ೧೯೮೮ ರಲ್ಲಿ ಎಂ.ವೈ.ಘೋರ್ಪಡೆಯವರಿAದ ಸಂಡೂರಿನಲ್ಲಿ ಸಂಡೂರು ಕುಶಲಾ ಕಲಾ ಕೇಂದ್ರ ಆರಂಭಗೊAಡಿತು. ಈ ಭಾಗದಲ್ಲಿರುವ ಬಹುಸಂಖ್ಯಾತ ಲಂಬಾಣಿಗರ ಬೇಡಿಕೆಯನ್ನು ಪೂರೈಸುವ ಜತೆಗೆ ನಶಿಸುತ್ತಿರುವ ಲಂಬಾಣಿ ಕಸೂತಿ ಕಲೆಗೆ ಜೀವ ತುಂಬುವ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ೪೫೦ಕ್ಕೂ ಹೆಚ್ಚು ಮಹಿಳೆಯರು ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸ್ಥೆಯ ಬೇಡಿಕೆ ಮತ್ತು ಮಾರ್ಗದರ್ಶನದಲ್ಲಿ ವಿಶೇಷ ವಿನ್ಯಾಸದಲ್ಲಿ ಲಂಬಾಣಿ ವಸ್ತçಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗ್ರಾಹಕರ ಬೇಡಿಕೆಯಂತೆ ವಾಲೆಯಾ, ಬಖಿಯಾ, ಅಡೋ ಡೋರಾ, ತೀನ್ ಸೂಯಿ ಮಾಕಿ, ಸೂರ್ಯಕಾಂತಿ ಮಾಕಿ, ಬಖಿಯಾ ಗೋಲ್ ಭೂರಿಯಾ, ಕಲ್ಯಾಣಿ, ರೆಲೋ, ಗಾದ್ರಿ ವಾಲೆಯಾ, ಜೋಡ್ ಪೊಟ್ಟೆ, ಆಂಗ್ಲಿ ಎಲೆ, ಸಂಧ್ಯಾ ಜೊವೆಲ್ಯ, ಲಂಬಾಣಿ ಟ್ರೆöÊಬಲ್ ಹ್ಯಾಂಡ್ ಎಂಬ್ರಾಯ್ಡರಿಡ್ ಸೇರಿದಂತೆ ಲಂಬಾಣಿ ಕಸೂತಿಯಲ್ಲಿ ಸುಮಾರು ೩೦ ವಿವಿಧ ರೀತಿಯ ಹೊಲಿಗೆಗಳು ಮತ್ತು ೧೦ ವಿಧದ ಮೋಟಿಫ್ ವಿನ್ಯಾಸಗಳನ್ನು ವಸ್ತçಗಳನ್ನು ತಯಾರಿಕೆಯಲ್ಲಿ ತೊಡಗಿದ್ದಾರೆ.

ಸಂಸ್ಥೆಯ ಪ್ರಮುಖ ಮೈಲಿಗಲ್ಲು: ಲಂಬಾಣಿ ಕಸೂತಿ ಕಲೆಯಲ್ಲಿ ತೊಡಗಿರುವ ಸಂಡೂರು ಕುಶಲಾ ಕಲಾ ಸಂಸ್ಥೆಯು ೨೦೧೦ರ ಸೆಪ್ಟೆಂಬರ್ ೩ ರಂದು ಜಿಐ ಟ್ಯಾಗ್ ಪಡೆದುಕೊಂಡಿದೆ. ಅಂಚೆ ಇಲಾಖೆಯಿಂದ ಬೌಗೋಳಿಕ ಸೂಚಿ ಪಟ್ಟಿಯಲ್ಲಿರುವ ಉತ್ಪನ್ನಗಳ ವಿಭಾಗದಲ್ಲಿ `ಸಂಡೂರು ಕಂಬಾಣಿ ಕಸೂತಿ' ಹೆಸರಲ್ಲಿ ೨೦೨೧ರ ಆಗಸ್ಟ್ ೩೧ ರಂದು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದೆ. ಅಲ್ಲದೇ, ಕೆಲ ವರ್ಷಗಳ ಹಿಂದೆ ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲೂ ಟ್ಯಾಬ್ಲೋ ಪ್ರದರ್ಶನದ ಮೂಲಕ ತನ್ನ ಹಿರಿಮೆಯನ್ನು ಸಾರಿತ್ತು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಗೆ ಸಿದ್ಧತೆ: ಸಂಡೂರು ಕುಶಲ ಕಲಾ ಕೇಂದ್ರದ ೪೫೦ ಮಹಿಳೆಯರು ವಿವಿಧ ವಿನ್ಯಾಸದಲ್ಲಿ ತಯಾರಿಸಿರುವ ೧೩೦೦ ಲಂಬಾಣಿ ವಸ್ತçಗಳನ್ನು ಒಂದೇ ಸೂರಿನಡಿ ಪ್ರದರ್ಶಿಸು ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಯಾಗಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಹಂಪಿಯ ಎದುರು ಬಸವಣ್ಣ ಮುಂಭಾಗದ ಸಾಲು ಮಂಟಪದಲ್ಲಿ ವಸ್ತç ಪ್ರರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ, ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯುತ್ತಿರುವ ಜಿ-೨೦ ಭಾಗವಾಗಿ ವಿಶ್ವದಾಖಲೆ ಏರ್ಪಡೆಸಿರುವುದು ಮತ್ತೊಂದು ವಿಶೇಷ.

ಜಿ - ೨೦ ಶೃಂಗದ ಗ್ರುಪ್ ಆಫ್ ಕಲ್ಚರಲ್ ಮೀಟಿಂಗ್‌ನಲ್ಲಿ ಸಂಡೂರು ಕುಶಲಾ ಕಲಾ ವಸ್ತçಗಳ ಪ್ರದರ್ಶನಕ್ಕೆ ಅನುಮತಿ ಕೇಳಿದ್ದೆವು. ಅದರೊಂದಿಗೆ ವಿಶ್ವ ದಾಖಲೆಗೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಜಿ -೨೦ ಭಾಗವಾಗಿ ಎರಡೂ ಒಟ್ಟಿಗೆ ನೆರವೇರುತ್ತಿರುವುದು ಎಂ.ವೈ.ಘೋರ್ಪಡೆ ಅವರ ಕುಟುಂಬದ ಮೈಲುಗಲ್ಲು ಇದಾಗಿದ್ದು, ನಮಗೆಲ್ಲ ಅತೀವ ಸಂತಸ ತಂದಿದೆ. ಈ ಬಗ್ಗೆ ಎರಡು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಸಂಸ್ಕೃತಿ ಸಚಿವಾಲಯದಿಂದ ಅಧಿಕೃತ ಮಾಹಿತಿ ಬಂದಿದೆ.
- ಪ್ರವೀಣ್ ರಾಜ್ ನಾಯ್ಕ, ಉಪ ವ್ಯವಸ್ಥಾಪಕ, ಸಂಡೂರು ಕುಶಲ ಕಲಾ ಕೇಂದ್ರ.