ಜಿಲ್ಲೆ

ರಾಮಕೃಷ್ಣ ನಾಯಕ್ ಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ

Dakshina Kannada

ಮಂಗಳೂರು: ಚಿತ್ರ ಕಲಾವಿದ ರಾಮಕೃಷ್ಣ ನಾಯಕ್ ಅವರ ಟೈಂ ಆ್ಯಂಡ್ ಸ್ಪೇಸ್-101 ಎಂಬ ಆಕ್ರಾಲಿಕ್ ಮಾಧ್ಯಮದ ಕಲಾಕೃತಿಗೆ 2021-22ನೇ ಸಾಲಿನ ಕರ್ಣಾಟಕ ಲಲಿತ ಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಲಾದ ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ, ಕೇಂದ್ರ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಆರ್.ಬಿ.ಭಾಸ್ಕರನ್, ಹಿರಿಯ ಸಾಹಿತಿ ಎಸ್.ದಿವಾಕರ್ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು.

ಪ್ರಶಸ್ತಿಯು 25 ಸಾವಿರ ರೂ.ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.