ಅಳವಂಡಿ ಸಮೀಪದ ಕಂಪ್ಲಿ ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಪಠಣ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಹನುಮಂತಗೌಡ, ನಾಗರಾಜ, ವೀರಣ್ಣ, ಸುಮಂಗಲಾ, ನಾಗರಾಜ, ಲಲಿತಾ, ಗೌರಮ್ಮ, ಗಾಯತ್ರಿ ಇತರರಿದ್ದರು. 
ಜಿಲ್ಲೆ

ಲಲಿತಾ ಸಹಸ್ರನಾಮ ಬ್ರಹ್ಮ ಪುರಾಣದ ಪಠ್ಯ

ಅಳವಂಡಿ: ದಿನ ನಿತ್ಯದ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಮುಕ್ತಿಹೊಂದಲು ಲಲಿತಾ ಸಹಸ್ರನಾಮ ಪಾರಾಯಣ ಮಾಡಬೇಕು ಎಂದು ಸಾಹಿತಿ ಸುಮಂಗಲಾ ಕೊಪ್ಪರದ ಹೇಳಿದರು.

ಸಮೀಪದ ಕಂಪ್ಲಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಬನಶಂಕರಿ ಬಳಗದ ಮಹಿಳಾ ಸದಸ್ಯರಿಂದ ನಡೆದ ಅಖಂಡ ಲಲಿತಾ ಸಹಸ್ರನಾಮ ಪಾರಾಯಣ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಶ್ರೀಲಲಿತಾ ಸಹಸ್ರನಾಮ ಎನ್ನುವುದು ಬ್ರಹ್ಮ ಪುರಾಣದ ಒಂದು ಪಠ್ಯವಾಗಿದೆ. ಲಲಿತಾ ಆನಂದ ದೇವತೆ ಪಾರ್ವತಿ ದೇವಿ ರೂಪ. ಸಮಸ್ತ ಜೀವ ಸಂಕುಲವನ್ನು ಕಷ್ಟ ಕಾರ್ಪಣ್ಯದಿಂದ ರಕ್ಷಿಸುವಂತೆ, ಮನುಜ ಕುಲದ ಶ್ರೇಷ್ಠತೆ ಅರಿವನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ಸರ್ವರು ನಡೆಯುವಂತೆ ಬಳಗದ ಸದಸ್ಯರು ಪಾರಾಯಣ ಮಾಡುತ್ತಿದ್ದಾರೆ.

ಲಲಿತಾ ಸಹಸ್ರನಾಮ ಪಠಿಸಿದರೆ ತಾಯಿಯು ಆಧ್ಯಾತ್ಮಿಕ ಮತ್ತು ಭೌತಿಕ ಆಕಾಂಕ್ಷೆಗಳನ್ನು ಪೂರೈಸುತ್ತಾಳೆ ಮತ್ತು ಕಾರ್ಯ ಸಿದ್ಧಿಯನ್ನು ನೀಡುತ್ತಾಳೆ, ಇದು ಸಂತೋಷ ಮತ್ತು ಮೋಕ್ಷ ನೀಡುತ್ತದೆ ಎಂದರು.

ಲಲಿತಾ ಪಂಚಮಿ ನಿಮಿತ್ಯ ಬಾಲ ಮಕ್ಕಳಾದ ಸ್ಕಂದಮಾತಾ ಸ್ವರೂಪದಲ್ಲಿ ಖುಷಿ ಬಿಸನಹಳ್ಳಿ ಮತ್ತು ಲಲಿತಾ ದೇವಿ ಸ್ವರೂಪದಲ್ಲಿ ಸ್ನೇಹ ಬಿಸನಳ್ಳಿ ವೇಷ ಧರಿಸಿ ಗಮನ ಸೆಳೆದರು. ಸುಮಾರು 30ಕ್ಕೂ ಹೆಚ್ಚು ಮಹಿಳೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.

ಪ್ರಮುಖರಾದ ಹನುಮಂತಗೌಡ ಗಾಳಿ, ವೀರಣ್ಣ ಗೊಂಡಬಾಳ, ನಾಗರಾಜ ಗಾಳಿ, ಲಲಿತಾ ಗಾಳಿ, ಗೌರಮ್ಮ ಧೋತರಗಾವಿ, ಗಾಯತ್ರಿ ಡಂಬರಳ್ಳಿ, ಮಹಾಲಕ್ಷ್ಮೀ ಬಿಸನಹಳ್ಳಿ, ಪ್ರತಿಮಾ ಗೊಂಡಬಾಳ, ಪೂರ್ಣಿಮಾ ಗುಗ್ಗರಿ ಇತರರಿದ್ದರು.