ಜಿಲ್ಲೆ

ನಾಳೆ ಲಕ್ಷ್ಮೀ ವೆಂಕಟರಮಣಸ್ವಾಮಿ ರಥೋತ್ಸವ

ಲಲಾಟಾಕ್ಷ ಎಸ್

ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಮಾವಿನಕೆರೆ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ರಥೋತ್ಸವ ಫೆ.22ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.


ಮಾವಿನಕೆರೆ ಛತ್ರದ ಸಮಿತಿಯಿಂದ ಕೈಗೊಂಡಿರುವ ಆರ‌್ಯವೈಶ್ಯ ಛತ್ರದ ಕಟ್ಟಡದ ನವೀಕರಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಛತ್ರದಲ್ಲಿ 21ರಂದು ಸಂಜೆ 6 ಗಂಟೆಗೆ ಗಣಪತಿ ಪ್ರಾರ್ಥನೆ, ಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ ವಾಚನ, ಮಂಡಲ ದರ್ಶನ, ಮಂಡಲ ಆರಾಧನೆ, ಕಳಸ ಸ್ಥಾಪನೆ, ವಾಸ್ತುರಾಕ್ಷೀಗ್ನ, ಆಗೋರಾಸ್ತ್ರ , ಸುದರ್ಶನ ಹೋಮ ಹಮ್ಮಿಕೊಳ್ಳಲಾಗಿದೆ. 22ರಂದು ಬೆಳಗ್ಗೆ 5 ಗಂಟೆಗೆ ಗಂಗೆಪೂಜೆ, ಗಣಪತಿ ಹೋಮ, ಸತ್ಯನಾರಾಣ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.


ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಭಾಗವಹಿಸಲಿದ್ದಾರೆ ಎಂದು ದೇವಾಲಯದ ಅರ್ಚಕ ಎಂ.ಎಸ್.ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.