ಲಾಯದುಣಸಿಯಲ್ಲಿ ಲಕ್ಷ್ಮೀ ವೆಂಕಟೇಶ್ವರ ಜಾತ್ರೆ ನಿಮಿತ್ತ ಭಕ್ತರು ದೇವರ ದರ್ಶನ ಪಡೆದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರು, ಉಪಾಧ್ಯಕ್ಷ ಜಗದೀಶಪ್ಪ, ಸದಸ್ಯ ಪಾಲಾಕ್ಷಗೌಡ, ಪ್ರಮುಖರಾದ ಗೋಸಲೆಪ್ಪ, ಯಮನೂರಪ್ಪ ಇತರರಿದ್ದರು. 
ಜಿಲ್ಲೆ

ಲಕ್ಷ್ಮೀ ವೆಂಕಟೇಶ್ವರ ಜಾತ್ರಾ ಮಹೋತ್ಸವ

Gangavati - Desk - Veeresh S Ullagaddi

ಕನಕಗಿರಿ: ತಾಲೂಕಿನ ಲಾಯದುಣಸಿ ಗ್ರಾಮದಲ್ಲಿ ಶ್ರೀಲಕ್ಷ್ಮೀ ವೆಂಕಟೇಶ್ವರ ಜಾತ್ರಾ ಮಹೋತ್ಸವ ಗುರುವಾರ ಸಡಗರದಿಂದ ಜರುಗಿತು.

ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ, ಅರ್ಚನೆ ನಡೆಯಿತು. ಭಕ್ತರು ನೈವೇದ್ಯ ಹಾಗೂ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು. ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಉಚ್ಛಾಯ ಜರುಗಿತು. ಭಕ್ತರು ಉತ್ತತಿ, ಬಾಳೆ ಹಣ್ಣು ಎಸೆದು ವೆಂಕಟರಮಣ ಗೋವಿಂದ ಗೋವಿಂದಾ…. ಎಂದು ನಾಮಸ್ಮರಣೆ ಮಾಡಿದರು.