ಜಿಲ್ಲೆ

ಚೆಟ್ಟಳ್ಳಿಯಲ್ಲಿ ಲಕ್ಷ್ಮಿ ಫಂಡ್ ಸಭೆ

reportermys

ಮಡಿಕೇರಿ:
ಚೆಟ್ಟಳ್ಳಿಯ ಲಕ್ಷ್ಮಿ ಫಂಡ್ ಸಭೆ ಫಂಡ್ ಅಧ್ಯಕ್ಷ ಪುತ್ತರಿರ ದೇವಯ್ಯ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಸಂಘದ ವರದಿಯನ್ನು ಕಾರ್ಯದರ್ಶಿ ಬೊಪ್ಪಟಿರ ನಾಣಯ್ಯ ಓದಿದರು. ಸಂಘದ ಅಭಿವೃದ್ದಿಯ ಬಗ್ಗೆ ಈ ವೇಳೆ ಚರ್ಚಿಸಲಾಯಿತು. ಎಲ್ಲರೂ ಸಹಕರಿದಾಗ ಫಂಡ್ ಅಭಿವೃದ್ಧಿ ಸಾದ್ಯವೆಂದು ಅಧ್ಯಕ್ಷ ಪುತ್ತರಿರ ದೇವಯ್ಯ ತಿಳಿಸಿದರು.

ಸಂಘದ ಉಪಾಧ್ಯಕ್ಷ ಮುಳ್ಳಂಡ ಕರಣ್ ಸೋಮಣ್ಣ, ಪುತ್ತರಿರ,ಬಟ್ಟೀರ, ಮುಳ್ಳಂಡ ಹಾಗೂ ಬೊಪ್ಪಟೀರ ಕುಟುಂಬದ ಸದಸ್ಯರು ಇದ್ದರು.


ಸನ್ಮಾನ: ಫಂಡ್ ಸದಸ್ಯರ ಪದವೀಧರ ಮಕ್ಕಳಿಗೆ ಸನ್ಮಾನಿಸುವಂತೆ ಈ ಬಾರಿ ಪುತ್ತರಿರ ಇಂದೂದೇವಯ್ಯಳಿಗೆ ಹಿರಿಯರಾದ ನಿವ್ರತ್ತ ವಾಯುಸೇನಾಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಹಾಗು ಈ ಬಾರಿ ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯಪ್ರಶಸ್ತಿ ವಿಜೇತರಾದ ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಫಂಡ್ ವತಿಯಿಂದ ಬಟ್ಟೀರ ವೇಣುನಾಚಪ್ಪ ಸನ್ಮಾನಿಸಿ ಗೌರವಿಸಿದರು