ಕೆಜಿಎಫ್​ನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಮುಂಭಾಗ ನೂತನ ರಾಜಗೋಪುರದ ನಿರ್ಮಾಣ ಕಾಮಗಾರಿಗೆ ಶಾಸಕಿ ರೂಪಕಲಾ ಭೂಮಿಪೂಜೆ ನೇರವೇರಿಸಿದರು. ಪ್ರಧಾನ ಅರ್ಚಕ ರಂಜಿತ್​ ಆಚಾರ್ಯ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಇದ್ದರು. 
ಜಿಲ್ಲೆ

66 ಅಡಿ ಎತ್ತರದ ರಾಜಗೋಪುರ ನಿಮಾರ್ಣ

ಕೆಜಿಎಫ್​: ದೇವಸ್ಥಾನಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳಾಗಿರುವುದರಿಂದ ನಗರದ ಹೃದಯ ಭಾಗದಲ್ಲಿರುವ ಶ್ರೀ ಲಕ್ಷಿ$್ಮ ವೆಂಕಟರಮಣ ದೇವಾಲಯದ ಮುಂಭಾಗ 4.99 ಕೋಟಿ ರೂ. ವೆಚ್ಚದಲ್ಲಿ ನೂತನ 66 ಅಡಿ ಎತ್ತರದ ರಾಜಗೋಪುರ ನಿಮಾರ್ಣ ಮಾಡಲಾಗುವುದು ಎಂದು ಶಾಸಕಿ ರೂಪಕಲಾ ಹೇಳಿದರು.

ನಗರದ ಗೀತಾ ರಸ್ತೆಯಲ್ಲಿರುವ ಶ್ರೀ ಲಕ್ಷಿ$್ಮ ವೆಂಕಟರಮಣ ದೇವಾಲಯದ ಬಳಿ ರಾಜಗೋಪುರ ನಿಮಾರ್ಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ದೇವಾಲಯದ ಮುಂಭಾಗ ರಾಜಗೋಪುರ ನಿಮಾರ್ಣ ಮಾಡಬೇಕೆಂಬುದು ಸಾವಿರಾರು ಭಕ್ತರ ಆಶಯವಾಗಿದ್ದು, ಗೋಪುರ ನಿಮಾರ್ಣಕ್ಕೆ ಸರ್ಕಾರದಿಂದ 4.99 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಕಾಮಗಾರಿಯನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದ ರೀತಿ ಶಾಸ್ತ್ರೋಕ್ತವಾಗಿ ನೇರವೇರಿಸಲಾಗುವುದು ಎಂದರು.

ದೇವಸ್ಥಾನವು ಮುಜರಾಯಿ ಇಲಾಖೆಯ ಎ ದರ್ಜೆಗೆ ಸೇರಿದ್ದು, ಬಹಳ ಕಾಲದಿಂದ ರಾಜಗೋಪುರ ನಿಮಾರ್ಣಕ್ಕೆ ಪ್ರಯತ್ನಪಟ್ಟರೂ ಕಾಲ ಕೂಡಿ ಬಂದಿರಲಿಲ್ಲ. ರಾಜಗೋಪುರವನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಟೆಂಡರ್​ ಕರೆದು ಬೆಂಗಳೂರು ಮೂಲದ ಗುತ್ತಿಗೆದಾರರು ನಿಯಮಾನುಸಾರ ಕಾಮಗಾರಿ ಪ್ರಾರಂಭಿಸಲಿದ್ದು, ಕಾಮಗಾರಿ ಒಂದು ವರ್ಷದಲ್ಲಿ ಸಂಪೂರ್ಣ ಮುಗಿಯಲಿದೆ ಎಂದರು.

ಗೋಪುರ ನಿಮಾರ್ಣದ ವಾಸ್ತು ಶಿಲ್ಪಿ ಶಂಕರ್​ ಸಪ್ತಿ ಮಾತನಾಡಿ, ದೇವಾಲಯದ ರಾಜಗೋಪುರ ನಿಮಾರ್ಣದಿಂದ ದೇಗುಲದ ಪ್ರಾಂಗಣದ ಧನಾತ್ಮಕ ಶಕ್ತಿ ನಮ್ಮಲ್ಲೊಂದು ಸಕಾರಾತ್ಮಕತೆಯ ಅಲೆ ಸೃಷ್ಟಿಸುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್​, ವಕೀಲರಾದ ಪದ್ಮನಾಭರೆಡ್ಡಿ, ಮುಜರಾಯಿ ಇಲಾಖೆಯ ಇಒ ಟಿ.ಸೆಲ್ವಮಣಿ, ಶ್ರೀನಿವಾಸರೆಡ್ಡಿ, ಲೋಕೊಪಯೋಗಿ ಇಲಾಖೆ ಎಇಇ ರಾಜಶೇಖರ್​ ಇದ್ದರು.