ಅರಕಲಗೂಡು ತಾಲೂಕಿನ ಮಲ್ಲರಾಜಪಟ್ಟಣದಲ್ಲಿ ಕಾವೇರಿ ನದಿ ದಂಡೆ ಮೇಲಿರುವ ಐತಿಹಾಸಿಕ ಶ್ರೀ ಲಕ್ಷ್ಮಣೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. 
ಜಿಲ್ಲೆ

ಶ್ರೀ ಲಕ್ಷ್ಮಣೇಶ್ವರ ದೇಗುಲದಲ್ಲಿ ಲಕ್ಷದೀಪೋತ್ಸವ

ರವಿಕುಮಾರ್ ಪಿ. ಕೆ

ಅರಕಲಗೂಡು: ತಾಲೂಕಿನ ಮಲ್ಲರಾಜ ಪಟ್ಟಣದಲ್ಲಿ ಕಾವೇರಿ ನದಿ ದಂಡೆ ಮೇಲಿರುವ ಐತಿಹಾಸಿಕ ಶ್ರೀ ಲಕ್ಷ್ಮಣೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಲಕ್ಷದೀಪೋತ್ಸವವನ್ನು ಭಕ್ತರು ಸಂಭ್ರಮದಿಂದ ಆಚರಿಸಿದರು.

ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಹೋಮ ಹವನ ನಡೆಯಿತು. ರಾತ್ರಿ ಭಕ್ತರು ಹಣತೆ ಬೆಳಗಿಸಿ ಭಕ್ತಿಭಾವ ಸಮರ್ಪಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಕಾರ್ತಿಕೋತ್ಸವ ಪೂಜೆ: ತಾಲೂಕಿನ ಮದಲಾಪುರ ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಡೇ ಕಾರ್ತಿಕೋತ್ಸವ ಪೂಜೆ ಸಡಗರದಿಂದ ಜರುಗಿತು. ರಾತ್ರಿ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಹೂವಿನಿಂದ ವಿಶೇಷವಾಗಿ ಅಲಂಕರಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಭಕ್ತರು ದೀಪ ಬೆಳಗಿಸಿ ಪುನೀತರಾದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.