ಜಿಲ್ಲೆ

ನಾಲ್ಕು ವರ್ಷ ಬಳಿಕ ಮಂಗಳೂರಿಗೆ ಆಗಮಿಸಿದ ಲಕ್ಷದ್ವೀಪದ ಪ್ರಯಾಣಿಕರ ಹಡಗು

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು

ನಾಲ್ಕು ವರ್ಷದ ಬಳಿಕ ಆರಂಭಗೊಂಡ ಲಕ್ಷದ್ವೀಪ- ಮಂಗಳೂರು ಪ್ರಯಾಣಿಕರ ಹಡಗು ಗುರುವಾರ ಸಂಜೆ ನಗರದ ಹಳೇಬಂದರು ತಲುಪಿತು.ಮುಂಜಾನೆ ಏಳು ಗಂಟೆಗೆ ಲಕ್ಷದ್ವೀಪದ ಕದ್ಮತ್ ದ್ವೀಪದಿಂದ ಪ್ರಯಾಣ ಆರಂಭಿಸಿದ ಕೊಚ್ಚಿಯ ಪರೊಲಿ ಹಡಗು ಅಲ್ಲಿಯದೇ ಇನ್ನೊಂದು ದ್ವೀಪ ಕದ್ಮತ್ ಗೆ ತಲುಪಿದೆ. ಅಲ್ಲಿಂದ 8.15 ಕ್ಕೆ ಪ್ರಯಾಣ ಆರಂಭಿಸಿ ಮಂಗಳೂರು ಬಂದರು ಹೊರವಲಯಕ್ಕೆ ಸಂಜೆ ಸುಮಾರು ನಾಲ್ಕು ಗಂಟೆ ತಲುಪಿ ಲಂಗರು ಹಾಕಿತು. ಹಳೇಬಂದರುನಲ್ಲಿ ಸರಕು ಹಡಗು ಸರಕು ತುಂಬಿಸಿಕೊಳ್ಳುತ್ತಿದ್ದ ಕಾರಣ ಮಂಗಳೂರು ಹಳೇ ಬಂದರು ಪ್ರವೇಶಕ್ಕೆ ಹಸಿರು ನಿಶಾನೆ ಪಡೆಯಲು ಹಡಗು ಸಂಜೆ 4.30 ತನಕ ಕಾಯಬೇಕಾಯಿತು. ಕೊನೆಗೂ ಹಡಗು 4.30 ಕ್ಕೆ ಹಳೇಬಂದರು  ತಲುಪಿತು.160 ಪ್ರಯಾಣಿಕರು, ಓರ್ವ ಪೈಲೆಟ್, ಓರ್ವ ಚೀಫ್ ಇಂಜಿನಿಯರ್, ಇನ್ನೋರ್ವ ಸಹ ಇಂಜಿನಿಯರ್, ಎಂಟು ಮಂದಿ ಕಾರ್ಮಿಕರು ಹಡಗಿನಲ್ಲಿ ಇದ್ದರು.