ಜಿಲ್ಲೆ

ಲಕ್ಷ ದೀಪೋತ್ಸವ 15ರಿಂದ

ಮಂಜುನಾಥ ಅಂಗಡಿ

ಧಾರವಾಡ: ನಗರದ ಸಾರಸ್ವತಪುರದ ರಡ್ಡಿ ಕಾಲನಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅ. 15ರಿಂದ 24ರವರೆಗೆ ಶ್ರೀ ವೆಂಕಟೇಶ್ವರ ಸ್ವಾಮಿ ನವರಾತ್ರಿ ಉತ್ಸವ ಮತ್ತು ಲಕ್ಷ ದೀಪೋತ್ಸವ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಸಹಿತಿ ಮಹಾಭಿಷೇಕ ಜರುಗಲಿದೆ. ಘಟಸ್ಥಾಪನೆ, ಕಳಶ ಸ್ಥಾಪನೆ ಹಾಗೂ ವಾಸುದೇವ ಪುಣ್ಯಾವಾಚನ ಮಹಾಸಂಕಲ್ಪ, ಸಂಜೆ ಲಕ್ಷ ದೀಪೋತ್ಸವ ಜರುಗುವುದು. ಸಂಜೆ ಪಲ್ಲಕ್ಕಿ ಉತ್ಸವ ಜರುಗುವುದು. ಸಂಜೆ 7 ಗಂಟೆಗೆ ಮಹಾಮಂಗಳಾರತಿ, ಸುದರ್ಶನ ಹೋಮ, 22ರಂದು ಕಲ್ಯಾಣೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.