ನಿರಂತರ ಮಳೆಗೆ ದೊಡ್ಡಳ್ಳಿ ಕಟ್ಟೆ ಭರ್ತಿಯಾಗಿ ಕೋಡಿ ಬಿದ್ದಿರುವುದು. 
ಜಿಲ್ಲೆ

ನಿರಂತರ ಮಳಗೆ ಕೋಡಿ ಬಿದ್ದ ಕೆರೆಗಳು

ಶನಿವಾರಸಂತೆ: ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಶನಿವಾರಸಂತೆ ವ್ಯಾಪ್ತಿಯ ಕೆರೆಗಳು ಕೋಡಿ ಬಿದ್ದಿವೆ.

ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದರೂ ಕೆರೆಕಟ್ಟೆಗಳು ನಿಧಾನಗತಿಯಲ್ಲಿ ಭರ್ತಿಯಾಗಿದ್ದವು. ಆದರೆ ಈಗ ಮಳೆಗಾಲ ಮುಗಿದರೂ ಅವಧಿಗಿಂತ ಹಿಂಗಾರು ಮಳೆ ರಭಸವಾಗಿ ಬೀಳುತ್ತಿರುವುದರಿಂದ ಕೆರೆಕಟ್ಟೆಗಳಲ್ಲಿ ನೀರು ಭರ್ತಿಯಾಗಿದೆ. ಆಲೂರು- ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ದೊಡ್ಡಳ್ಳಿ ಕಟ್ಟೆಯಲ್ಲಿ ನೀರು ಭರ್ತಿಯಾಗಿದ್ದು ಮೇಗೋಡಿಯಲ್ಲಿ ನೀರು ರಭಸದಿಂದ ಹರಿಯುತ್ತಿದೆ.

ಈ ವರ್ಷದ ಮಳೆಗಾಲದಲ್ಲಿ ದೊಡ್ಡಳ್ಳಿ ಕಟ್ಟೆ ನಿಧಾನಗತಿಯಲ್ಲಿ ಭರ್ತಿಯಾಗಿತ್ತು. ಆದರೆ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ದೊಡ್ಡಳ್ಳಿ ಕಟ್ಟೆ ಭರ್ತಿಯಾಗಿದ್ದು, ರಭಸವಾಗಿ ಹರಿಯುವ ನೀರು ಕೆರೆ ಏರಿಗೆ ಅಡ್ಡಲಾಗಿ ಅಳವಡಿಸಿದ್ದ ಮೆಸ್ ಕಿತ್ತುಹೋಗಿದೆ. ಇದರಿಂದ ಕೆರೆಯಲ್ಲಿನ ಮೀನುಗಳು ಕೋಡಿಯಲ್ಲಿ ಕೊಚ್ಚಿ ಹೋಗಿದೆ. ಅಕಾಲಿಕ ಹಿಂಗಾರು ರೈತರು ಮತ್ತು ಜನರಲ್ಲಿ ಆತಂಕ ಸೃಷ್ಟಿಸಿದೆ.