ಜಿಲ್ಲೆ

ಗದ್ದೆಗೆ ನುಗ್ಗಿದ ಕೆರೆ ನೀರು

ಉತ್ತರ ಕನ್ನಡ ಡೆಸ್ಕ್

ಮುಂಡಗೋಡ: ಕೆರೆಯ ಕೊಡಿ ನೀರು ಹರಿಯುವ ಕಾಲುವೆ ಒಡೆದು ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ.

ಮಳಗಿ ಗ್ರಾಮದಲ್ಲಿನ ದೊಡ್ಡಕೆರೆ ಎರಡು ದಿನಗಳಿಂದ ಭರ್ತಿಯಾಗಿ ಕೊಡಿ ಹರಿಯುತ್ತಿದೆ. ಕೊಡಿಯ ನೀರು ಹರಿದು ಹೋಗುವ ಕಾಲುವೆಯ ಒಡ್ಡು ಒಂದು ಬದಿ ಒಡೆದ ಪರಿಣಾಮ ನೀರು ಪಕ್ಕದ ಮಂಜುನಾಥ ಅಂಗಡಿ ಹಾಗೂ ವಡಕಪ್ಪ ನೇಗೋಣಿ ಎಂಬುವರ ಗದ್ದೆಗಳಿಗೆ ನುಗ್ಗಿ ಹಾನಿ ಸಂಭವಿಸಿದೆ. ಭತ್ತದ ನಾಟಿ ಮಾಡಲು ಹಾಕಿದ್ದ ಸಸಿಗಳು ಕೊಚ್ಚಿ ಹೋಗಿವೆ ಹಾಗೂ ಗದ್ದೆಯಲ್ಲಿನ ಮಣ್ಣು ಸಹ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಹಾನಿ ಸಂಭವಿಸಿದೆ.