ಸಂಕೇಶ್ವರ: ನಿರಂತರ ಮಳೆಯಿಂದ ಹುಕ್ಕೇರಿ ಕ್ಷೇತ್ರದ 27 ಕೆರೆಗಳ ಪೈಕಿ ಬಹುತೇಕ ಕೆರೆಗಳು ಅರ್ಧದಷ್ಟು ಭರ್ತಿಯಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪವನ ಕತ್ತಿ ಹೇಳಿದರು.
ಪಟ್ಟಣದ ಹಿರಣ್ಯಕೇಶಿ ನದಿಗೆ ಅಳವಡಿಸಲಾಗಿರುವ 33 ಕೆರೆಗಳಿಗೆ ನೀರು ತುಂಬುವ ಜಾಕ್‌ವೆಲ್ ಕಂ ಪಂಪಹೌಸ್ ಶುಕ್ರವಾರ ಪರಿಶೀಲಿಸಿ ಮಾತನಾಡಿ, ತಿಂಗಳಿಂದ ಹುಕ್ಕೇರಿ ಕ್ಷೇತ್ರದ 27 ಹಾಗೂ ಚಿಕ್ಕೋಡಿ ತಾಲೂಕಿನ 6 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ನದಿಯಲ್ಲಿ ಉಂಟಾಗಿರುವ ಪ್ರವಾಹ ಭೀತಿಯಿಂದ ಪಂಪಹೌಸ್ ಬಂದ್ ಮಾಡಲಾಗುವುದು. ಪ್ರವಾಹ ಪರಿಸ್ಥಿತಿ ಕಡಿಮೆಯಾದ ಬಳಿಕ ಮತ್ತೆ ಕೆರೆಗಳಿಗೆ ನೀರು ತುಂಬಿಸಲು ಶಾಸಕ ನಿಖಿಲ್ ಕತ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.