ಜಿಲ್ಲೆ

ಕೆರೆ ಪುನಶ್ಚೇತನ ಶ್ರೇಷ್ಠ ಕಾರ್ಯ

Karthika K.S

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಪೂರ್ವಜರ ಕಾಲದಲ್ಲಿ ಜಲ ಮೂಲಗಳಲ್ಲಿ ನೀರಿನ ಅಂತರ್ಜಲ ಸಂವರ್ಧನೆ ಕೃಷಿ ಜಾನುವಾರುಗಳಿಗೆ ನೀರಿನಾಶ್ರಯಕ್ಕಾಗಿ ನಿರ್ಮಿಸಿದ ಹಲವಾರು ಕೆರೆ ಮದಗಗಳು ಇತ್ತೀಚಿನ ವರ್ಷಗಳಲ್ಲಿ ಅತಿಕ್ರಮಣದೊಂದಿಗೆ ಕಣ್ಮರೆಯಾಗಿರುವುದು ದುರದೃಷ್ಟಕರ. ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ನಮ್ಮೋರು ನಮ್ಮ ಕೆರೆ ಪುನಶ್ಚೇತನ ಕಾರ್ಯ ಶ್ರೇಷ್ಠವಾಗಿದೆ ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಹೇಳಿದರು.

ಅಲ್ಬಾಡಿ ಭಾರಮಕ್ಕಿ ಎಂಬಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಬೆಳ್ವೆ ಗ್ರಾ.ಪಂ., ಭಾರಮಕ್ಕಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಸ್ಥಳೀಯರ ಸಂಯುಕ್ತ ಆಶ್ರಯದಲ್ಲಿ ಪುನಶ್ಚೇತನಗೊಳಿಸಲಾದ ನಮ್ಮೋರು ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲ್ಬಾಡಿ ಭಾರಮಕ್ಕಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಿನಕರ ಶೆಟ್ಟಿ ಗುಡ್ಡಿಮನೆ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ಶ್ರೀನಾಥ ಭಟ್ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಬೆಳ್ವೆ ವಲಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುವಾರ್ ಶೆಟ್ಟಿ ಬೆಳ್ವೆ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂ ಉಪಾಧ್ಯಕ್ಷ ಬಿ.ಹರೀಶ್ ಕಿಣಿ ಬೆಳ್ವೆ, ಬೆಳ್ವೆ ಗ್ರಾ.ಪಂ. ಅಧ್ಯಕ್ಷೆ ರಾಧಾ, ಸದಸ್ಯ ಕರುಣಾಕರ ಶೆಟ್ಟಿ ಅಲ್ಬಾಡಿ, ಪಿಡಿಒ ಪ್ರಭಾಶಂಕರ್ ಪುರಾಣಿಕ್, ಬೆಳ್ವೆ ಶ್ರೀ ಶಂಕರನಾರಾಯಣ ದೇಗುಲ ಮೊಕ್ತೇಸರ ಬಿ.ಶಂಕರ ಶೆಟ್ಟಿ ಬೆಳ್ವೆ, ಕೃಷಿಕ ಕೃಷ್ಣ ನಾಯ್ಕ ಬೆಳ್ವೆ, ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಬೆಳ್ವೆ ವಲಯ ಒಕ್ಕೂಟ ಅಧ್ಯಕ್ಷ ಕೃಷ್ಣ ಪುತ್ರನ್ ಆರ್ಡಿ, ಅಲ್ಬಾಡಿ ವಲಯ ಒಕ್ಕೂಟದ ಅಧ್ಯಕ್ಷ ರವಿಚಂದ್ರ ನಾಯ್ಕ ಮೊದಲಾದವರಿದ್ದರು.

ಕೃಷಿ ಅಧಿಕಾರಿ ಉಮೇಶ್ ಬಿ.ಕೆ. ಸ್ವಾಗತಿಸಿದರು. ಮಂಜುನಾಥ ಮರೂರು ಪ್ರಾರ್ಥಿಸಿದರು. ಬೆಳ್ವೆ ವಲಯ ಮೇಲ್ವಿಚಾರಕ ರಾವೇಂದ್ರ ಗೌಡ ನಿರೂಪಿಸಿದರು. ಸೇವಾ ಪ್ರತಿನಿಧಿ ಪ್ರಶಾಂತ್ ಗುಮ್ಮೋಲ ವಂದಿಸಿದರು.