ಜಿಲ್ಲೆ

ಕೆರೆಯಲ್ಲಿ ಮುಳುಗಿ ಬಾಲಕ ಸಾವು

Belagavi

ಕಕ್ಕೇರಿ: ಸ್ಥಳೀಯ ಅರಳಿಕಟ್ಟಿ ಕೆರೆಯಲ್ಲಿ ಸ್ನೇಹಿತರೊಂದಿಗೆ ಗುರುವಾರ ಬೆಳಗ್ಗೆ ಈಜು ಕಲಿಯಲು ಹೋಗಿದ್ದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕಕ್ಕೇರಿ ಗ್ರಾಮದ ನಿವಾಸಿ ಸಾವಿಯೋ ಶ್ಯಾಮ್ಸನ್ ಫರ್ನಾಂಡಿಸ್ (12) ಮೃತ ಬಾಲಕ.

ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ನೀರಿನಲ್ಲಿ ಮುಳುಗುತ್ತಿರುವ ಬಾಲಕನನ್ನು ನೋಡಿ ಕಾಪಾಡಿ ಎಂದು ಕೂಗಿದ್ದಾರೆ. ಕೂಡಲೇ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಆಗಮಿಸಿ ಬಾಲಕನ್ನು ಮೇಲಕ್ಕೆತ್ತಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ನಂದಗಡ ಠಾಣೆ ಪಿಎಸ್‌ಐ ಸುಮಾ ನಾಯಕ ಭೇಟಿ ನೀಡಿ ಪರಿಶೀಲಿಸಿದರು. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.