ಚಿಕ್ಕಮಗಳೂರು: ಹಿರೇಮಗಳೂರು ದೊಡ್ಡಕೆರೆಯ ಕಾಲುವೆ ಅನೇಕ ವರ್ಷಗಳಿಂದ ಹೂಳು, ಕಸ ತುಂಬಿಕೊAಡಿದ್ದ ಹಿನ್ನೆಲೆ ಗ್ರಾಮಸ್ಥರು ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಭೇಟಿ ಸಲ್ಲಿಸಿ ಸಮಸ್ಯೆ ವಿವರಿಸಿದ ಮರುದಿನವೇ ಸಮಸ್ಯೆ ಪರಿಹಾರ ಒದಗಿಸಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಗ್ರಾಮದ ಹಿರಿಯ ಜಾನಯ್ಯ, ಹಿರೇಮಗಳೂರು ಗ್ರಾಮದ ದೊಡ್ಡಕೆರೆ ಚಾನಲ್ ಮೂಲಕ ಹಿರೇಮಗಳೂರು, ಬಂಡಿಹಳ್ಳಿ, ಕನ್ನೇನಹಳ್ಳಿ, ಲಕ್ಷಿö್ಮÃಪುರ, ಮಲ್ಲೇದೇವರನಹಳ್ಳಿ ಹಾಗೂ ಕರ್ತಿಕೆರೆ ಗ್ರಾಮಗಳಿಗೆ ನೀರುಣಿಸಲಾಗುತ್ತಿದೆ. ಆದರೆ ಕೆಲ ವರ್ಷಗಳಿಂದ ಕಾಲುವೆಯಲ್ಲಿ ಗಿಡ-ಗಂಟಿ ಬೆಳೆದು, ಮಣ್ಣು ತುಂಬಿಕೊAಡಿದ್ದರಿAದ ಸಮರ್ಪಕವಾಗಿ ನೀರು ಲಭ್ಯವಾಗುತ್ತಿರಲಿಲ್ಲ ಎಂದರು.
ನಗರಕ್ಕೆ ಸಮೀಪವಿರುವ ಹಿರೇಮಗಳೂರು ದೊಡ್ಡಕೆರೆ ಹೂಳು ತೆಗೆಯುವ ಸಂಬAಧ ಸಣ್ಣ ನೀರಾವರಿ ಇಲಾಖೆ ಹಾಗೂ ಹಾಲಿ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಗಮನಕ್ಕೆ ತಂದಾಗ ವೈಯಕ್ತಿಕ ಖರ್ಚಿನಿಂದ ರೈತರಿಗೆ ಅನುಕೂಲ ಕಲ್ಪಿಸಲು ಜೆಸಿಬಿ ಕರೆಸಿ ಕಾಲುವೆ ಕಸ ತೆರವಿಗೆ ಮುಂದಾಗಿದ್ದಾರೆ ಎಂದರು.
ಸತತ ಎರಡು ದಶಕಗಳ ಶಾಸಕರಾಗಿ ಹಿರೇಮಗಳೂರಿಗೆ ರಸ್ತೆ, ಅಂಗವಿಕಲ-ವಿಧವಾವೇತನ, ಆರೋಗ್ಯ ಕೇಂದ್ರ ಜೊತೆಗೆ ರೈತರಿಗೆ ನೀರಾವರಿ ಸೌಲಭ್ಯ ಸೇರಿದಂತೆ ಬಹಳಷ್ಟು ಅಭಿವೃದ್ಧಿಗೆ ಶ್ರಮಿಸಿ ಸಾರ್ಥಕ ನಾಯಕರಾಗಿದ್ದಾರೆ. ರೈತಪರ ನಿಲುವು ಹೊಂದಿರುವ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥ ಚಂದ್ರಶೇಖರ್ ಮಾತನಾಡಿ, ಹಿರೇಮಗಳೂರು ಕೆರೆ ಎರಡು ಸಾವಿರ ಎಕರೆ ಅಚ್ಚುಕಟ್ಟು ಹೊಂದಿರುವ ನೀರಾವರಿ ಪ್ರದೇಶವಾಗಿದೆ. ಕೆರೆ ಭರ್ತಿಗೊಂಡಿದ್ದರೂ ಕೂಡಾ ರೈತರಿಗೆ ಕಳೆದ ಒಂದೂವರೆ ವರ್ಷಗಳಿಂದ ಉಪಯೋಗಕ್ಕಿಲ್ಲ ಹಾಗೂ ಕಾಲುವೆ ನೀರು ಸಮರ್ಪಕವಾಗಿ ಜಮೀನಿಗೆ ಹಾಯಿಸಲು ಸಾಧ್ಯವಾಗುತ್ತಿಲ್ಲ. ಈ ವೇಳೆ ಸಿ.ಟಿ.ರವಿ ಗ್ರಾಮಸ್ಥರಿಗೆ ಸ್ಪಂದಿಸಿರುವುದು ಸ್ವಾಗತಾರ್ಹ ಎಂದರು.
ಕಾಲುವೆ ಸಂಪೂರ್ಣ ಹದಗೆಟ್ಟಿರುವ ಕಾರಣ ಹೊಸ ಕಾಲುವೆಯಾಗಿ ನಿರ್ಮಿಸಿಕೊಡಬೇಕು. ದುರಸ್ಥಿಗೊಳಿಸಿ ಮುಂದುವರೆಸಿದರೆ ಪದೇ ಪದೇ ಈ ಸಮಸ್ಯೆ ಕಾಡಲಿದೆ. ಹೀಗಾಗಿ ಹಾಲಿ ಶಾಸಕ ತಮ್ಮಯ್ಯ ಹಿರೇಮಗಳೂರು ನಿವಾಸಿಯಾದ ಕಾರಣ ರೈತಾಪಿ ವರ್ಗಕ್ಕೆ ಅನುಕೂಲ ಕಲ್ಪಿಸಲು ಹೊಸ ಕಾಲುವೆ ನಿರ್ಮಿಸಿ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಭಾಗದ ಸುತ್ತಮುತ್ತಲು ಕೆಲವು ಜನಪ್ರತಿನಿಧಿಗಳು ಅಥವಾ ಇತರೆ ವ್ಯಕ್ತಿಗಳು ವೈಯಕ್ತಿಕ ಲಾಭದ ದೃಷ್ಟಿಯಿಂದ ನಿವೇಶನ ಮಾರ್ಪಡಿಸುತ್ತಾರೆಯೇ ಹೊರತು ಕೆಲ ರೈತರಿಗೆ ತಳಭಾಗದ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ. ಇದರಿಂದ ಒಂದೆಡೆ ನೀರಿಲ್ಲದೇ ಬೆಳೆನಷ್ಟದಿಂದ ರೈತರು ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ಉಂಟಾಗಿದೆ ಎಂದರು.
ಗ್ರಾಮಸ್ಥ ಎಚ್.ಕೆ.ಕೇಶವಮೂರ್ತಿ ಮಾತನಾಡಿ, ರೈತರ ಜೀವನಾಡಿ ದೊಡ್ಡಕೆರೆ ಕಾಲುವೆಯಲ್ಲಿ ಹುಲ್ಲು, ಸೊಪ್ಪು ಅತಿಯಾಗಿ ಬೆಳೆದು ನೀರು ಹರಿಯದೇ ಜನ-ಜಾನುವಾರುಗಳಿಗೆ ಸಮಸ್ಯೆಯಾಗಿದೆ. ಕಾಲುವೆ ಅಚ್ಚು ಕಟ್ಟಾಗಿ ನಿರ್ಮಿಸುವಂತೆ ಗ್ರಾಮಸ್ಥರು ಹಾಲಿ ಶಾಸಕ ತಮ್ಮಯ್ಯ ಹಾಗೂ ನೀರಾವರಿ ಇಲಾಖೆಗೆ ಗಮನಕ್ಕೆ ತಂದರೂ ಗಮನಕ್ಕೆ ಬಾರದ ಹಿನ್ನೆಲೆ ಜಾನಯ್ಯ ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಸಿ.ಟಿ.ರವಿಗೆ ವಿಷಯ ಪ್ರಸ್ತಾಪಿಸದ ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಿಜಯ್‌ಕುಮಾರ್, ರಾಜು, ಯೋಗೇಂದ್ರ, ಸುರೇಶ್, ಓಂಕಾರ, ನಾಗರಾಜ್, ಧರ್ಮರಾಜು, ಗಣೇಶ, ಸೋಮಣ್ಣ, ರವಿಕುಮಾರ್, ಮಹೇಶ್, ಪಾಪಣ್ಣ ಮತ್ತಿತರರಿದ್ದರು.