ಮೈಸೂರು: ದೀಪಾವಳಿ ಸಂದರ್ಭದಲ್ಲಿ ಹಚ್ಚಿದ ಪಟಾಕಿ ಸಿಡಿದು ಉಳಿದು ಹೊಗೆಯಾಡುತ್ತಿರುವ ದೃಶ್ಯವನ್ನು ನೆನಪಿಸುವ ರೀತಿಯಲ್ಲೇ ಯುವತಿಯೊಬ್ಬಳ ಶವ ಕೂಡ ಪತ್ತೆಯಾಗಿದ್ದು, ನೋಡುಗರನ್ನು ದಿಗ್ಭ್ರಮೆಗೊಳಿಸುವಂತಿದೆ!
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಹೊಸಕೋಟೆ ರಸ್ತೆಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿದೆ. ಅದರಲ್ಲೂ ಆಕೆಯ ದೇಹ ಅರ್ಧ ಸುಟ್ಟುಹೋಗಿದ್ದು, ಇನ್ನೂ ಬೆಂಕಿ ಉರಿಯುತ್ತಲೇ ಇರುವುದರಿಂದ ಹೊಗೆಯಾಡುತ್ತಲೇ ಇದೆ.
ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಧಾವಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಮಾಡಿ ಸುಡಲು ಯತ್ನಿಸಿರಬಹುದು ಎಂದು ಸದ್ಯಕ್ಕೆ ಪೊಲೀಸರು ಶಂಕಿಸಿದ್ದು, ಮಹಿಳೆಯ ಗುರುತು ಮತ್ತಿತತರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.