ಜಿಲ್ಲೆ

ಉದ್ಯೋಗ ನೀಡದ‌ ಐಟಿ ಕಂಪನಿಗೆ ಯುವತಿ ಹುಸಿ ಬಾಂಬ್ ಕರೆ?

ಮಂಜುನಾಥ ಕೋಳಿಗುಡ್ಡ


-ಬೆಳಗಾವಿ ಶಾಹುನಗರದ ಯುವತಿ ವಿಚಾರಣೆ
ಬೆಳಗಾವಿ: ಐಟಿ ಕ್ಷೇತ್ರದ ‌ಪ್ರತಿಷ್ಠಿತ ಕಂಪನಿ ಟಿಸಿಎಸ್ ಕಂಪನಿ ಉದ್ಯೋಗ ನೀಡಲು ನಿರಾಕರಿಸಿದ ಹಿನ್ನೆಲೆ ಹುಸಿ ಬಾಂಬ್ ಕರೆ ಮಾಡಿದ ಆರೋಪದ ಬೆಳಗಾವಿ ನಗರದ ಯುವತಿಯನ್ನು  ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬೆಳಗಾವಿ ಶಾಹುನಗರದ ಶೃತಿ.ಎಂ.ಎಸ್. ಎಂಬುವವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಪೊಲೀಸರು ವಿಚಾರ ‌ನಡೆಸಿದ್ದಾರೆ. ಅಲ್ಲದೆ, ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಬರುವಂತೆ ಯುವತಿಗೆ ಮತ್ತು ಪೋಷಕರಿಗೆ ನೋಟೀಸ್ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ತಿಳಿದಿದ್ದಾರೆ.