ಜಿಲ್ಲೆ

ಹಣ, ಬಂಗಾರ ತುಂಬಿದ್ದ ಬ್ಯಾಗನ್ನು ಕುಮಟಾ ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ಮಹಿಳೆ-ಮುಂದೇನಾಯ್ತು..?

ಸುಭಾಸ ಹೆಗಡೆ ಧೂಪದಹೊಂಡ

ಕಾರವಾರ:ಕುಮಟಾ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ಭಾರಿ ಪ್ರಮಾಣದ ನಗ, ನಗದು ತುಂಬಿದ್ದ ಬ್ಯಾಗ್‌ನ್ನು ಕೊಂಕನ ರೈಲ್ವೆ ಅಧಿಕಾರಿಗಳು ಹಾಗೂ ಆರ್‌ಪಿಎಫ್ ಅಧಿಕಾರಿಗಳು ಸೇರಿ ವಾರಸುದಾರರಿಗೆ ಮರಳಿಸಿದ್ದಾರೆ.
ಕುಮಟಾ ರೈಲ್ವೆ ನಿಲ್ದಾಣದಲ್ಲಿ ಟ್ರಾಲಿ ಬ್ಯಾಗ್ ಸಿಕ್ಕಿರುವ ಬಗ್ಗೆ ಆರ್‌ಪಿಎಫ್ ಅಧಿಕಾರಿಗಳಿಗೆ ಗುರುವಾರ ಬೆಳಗ್ಗೆ ಕರೆ ಬಂದಿತ್ತು. ಆದರೆ, ಅದರ ಮಾಲೀಕರ ಮಾಹಿತಿ ಇರಲಿಲ್ಲ. ಕಾರವಾರ ಆರ್‌ಪಿಎಫ್ ಠಾಣೆಯ ಅಧಿಕಾರಿ ಸಂದೀಪ ಕುಮಾರ್ ಅದನ್ನು ವಶಕ್ಕೆ ಪಡೆದಿದ್ದರು. ಅದನ್ನು ತೆರೆದು ನೋಡಿದಾಗ 4 ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳು ಹಾಗೂ 1.33 ಲಕ್ಷ ರೂ. ನಗದು ಇರುವುದು ಕಂಡುಬಂದಿತ್ತು. ನಂತರ ಬ್ಯಾಗ್‌ನ ವಾರಸುದಾರೆ ಕುಮಟಾ ದೀವಗಿಯ ಗಂಗಾ ರಮೇಶ ಪುರೋಹಿತ್ ತಮ್ಮ ಸಂಬAಧಿಕರ ಮೂಲಕ ಕೊಂಕಣ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಕಾರವಾರ ಆರ್‌ಪಿಎಫ್ ಕಚೇರಿಗೆ ಬಂದು ಭೇಟಿಯಾದರು. ಆರ್‌ಪಿಎಫ್ ಅಧಿಕಾರಿಗಳು ಬ್ಯಾಗ್ ಹಸ್ತಾಂತರಿಸಿದ್ದಾರೆ.