ಜಿಲ್ಲೆ

ವಿಷ ಸೇವಿಸಿದ್ದ ಬಾಣಂತಿ ಸಾವು

Mangaluru - Desk - Rajesh Shetty

ಬೆಳ್ತಂಗಡಿ: ಬಾಣಂತಿಯೊಬ್ಬರು ಹೆರಿಗೆ ವೇಳೆ ಉಂಟಾದ ಗಾಯದ ನೋವು ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಜಾರಿಗೆದಡಿ ನಿವಾಸಿ ಆನಂದ ಮಲೆಕುಡಿಯ ಎಂಬುವರ ಪತ್ನಿ ಸುಪ್ರೀತಾ(25) ಎಂಬುವರಿಗೆ ಆ.1ರಂದು ಉಡುಪಿಯಲ್ಲಿ ಹೆರಿಗೆಯಾಗಿದ್ದು, ನಂತರ ವಿಪರೀತ ನೋವು ಕಂಡು ಬಂದಿದ್ದು ಆ.26ರಂದು ನೋವು ತಾಳಲಾಗದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಇವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಕುರಿತು ಬೇಬಿ ಎಂಬುವರು ವೇಣೂರು ಠಾಣೆಗೆ ದೂರು ಸಲ್ಲಿಸಿದ್ದಾರೆ.