ಜಿಲ್ಲೆ

ಹೆಣ್ಣು ಮಕ್ಕಳೆಂದು ಗಂಡನ ಕಿರುಕುಳ -ಮಹಿಳೆ ಆತ್ಮಹತ್ಯೆ

Uttara Kannada - Subash Hegde
ಯಲ್ಲಾಪುರ: ತಾಲೂಕಿನ ಕಿರವತ್ತಿಯಲ್ಲಿ ಪತಿಯ ಕಿರುಕುಳ ತಾಳಲಾರದೇ ವಿಷ ಸೇವಿಸಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
   ಕಿರವತ್ತಿ ಜಯಂತಿನಗರದ ಪೂಜಾ ಸುನಿಲ್‌ ಮೋಹಿತೆ (33) ಮೃತ ಮಹಿಳೆ. ಕಳೆದ ಹದಿಮೂರು ವರ್ಷದ ಹಿಂದೆ ಸುನಿಲ್ ಸಂಜಯ ಮೊಹಿತೆ ಎನ್ನುವವರನ್ನು ಮದುವೆಯಾಗಿದ್ದು, ದಂಪತಿಗೆ ಐದು ಜನ ಹೆಣ್ಣು ಮಕ್ಕಳಿದ್ದಾರೆ. ಎಲ್ಲಾ ಮಕ್ಕಳು ಹೆಣ್ಣಾಗಿರುವುದರಿಂದ ಪತಿ ವಿನಾಕಾರಣ ಅನುಮಾನ ಪಡುವುದು, ಹೊಡೆಯುವುದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪೂಜಾ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.‌ ಯಲ್ಲಾಪುರ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.