ಹಿರೀಸಾವೆ ಹೋಬಳಿ ಉಳ್ಳಾವಳ್ಳಿ ಗ್ರಾಮದ ಶ್ರೀ ವಿನಾಯಕ ಮಂದಿರದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಗೌರಿ-ಗಣೇಶ ಮೂರ್ತಿ.  
ಜಿಲ್ಲೆ

ವಿನಾಯಕನ ವಿಸರ್ಜನೆಗೆ ನೀರಿನ ಕೊರತೆ

ಹಿರೀಸಾವೆ: ಈ ಬಾರಿ ಕೆರೆ-ಕಟ್ಟೆಗಳಲ್ಲಿ ನೀರು ತುಂಬುವ ನಿಟ್ಟಿನಲ್ಲಿ ಹಿರೀಸಾವೆ ಹೋಬಳಿ ವ್ಯಾಪ್ತಿ ವಾಡಿಕೆಯಂತೆ ಮಳೆಯಾಗಿಲ್ಲ. ಹಿರೀಸಾವೆ, ದಿಡಗ ಹಾಗೂ ಸುತ್ತಮುತ್ತಲ ಗ್ರಾಮಗಳ ಕೆರೆ-ಕಟ್ಟೆಗಳಲ್ಲಿ ನಿರೀಕ್ಷೆಯಂತೆ ಮಳೆನೀರು ಸಂಗ್ರಹವಾಗಿಲ್ಲ.

ಪರಿಣಾಮ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿಗಳ ವಿಸರ್ಜನೆಗೆ ನೀರಿನ ಕೊರತೆ ಎದುರಾಗಲಿದೆ. ಕೆಲವೊಂದು ಕೆರೆಯಂಗಳದಲ್ಲಿರುವ ಗುಂಡಿಗಳಿಗೆ ಗಣೇಶ ಮೂರ್ತಿಯನ್ನು ವಿಸರ್ಜಿಸಬಹುದು. ಆದರೆ ಬಹುತೇಕ ಕೆರೆ-ಕಟ್ಟೆಗಳಲ್ಲಿ ನೀರಿಲ್ಲ. ಕಾರಣ ಈ ಬಾರಿ ಅಂತಹ ಗ್ರಾಮಗಳಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ದೊಡ್ಡದಾಗಿ ಹೊಂಡ ತೆಗೆಸಿ ಕೊಳವೆ ಬಾವಿಯಿಂದ ಹೊಂಡಕ್ಕೆ ನೀರು ತುಂಬಿಸಿ ವಿನಾಯಕನನ್ನು ವಿಸರ್ಜಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ.


ದಿಡಗ ಗ್ರಾಮದ ಶ್ರೀ ವಿನಾಯಕ ಮಂದಿರದಲ್ಲಿ ಗೌರಿ-ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಸೇವಾ ಸಮಿತಿ ಅಧ್ಯಕ್ಷ ಕೆ.ಪಿ.ರಾಮಕೃಷ್ಣ, ಗೌರವಾಧ್ಯಕ್ಷ ಎನ್.ರವಿಕುಮಾರ್, ಖಜಾಂಚಿ ಎಸ್.ಕುಮಾರ್, ಕಾರ್ಯದರ್ಶಿ ಪ್ರಕಾಶ್, ಉಪಕಾರ್ಯದರ್ಶಿ ಎಚ್.ಆರ್.ಮಹೇಶ್ ಇತರರು ಇದ್ದರು.