ಜಿಲ್ಲೆ

ಗ್ರಾಮೀಣರಲ್ಲಿ ಕಾಡುತ್ತಿದೆ ಅರಿವಿನ ಕೊರತೆ

ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿಕೆ

ವಿಜಯವಾಣಿ ಸುದ್ದಿಜಾಲ ತುರುವೇಕೆರೆ
ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರ್ಘಟನೆಗಳು ನಡೆಯದಂತೆ ಗ್ರಾಮೀಣ ಭಾಗದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು ಎಂದು ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮನವಿ ಮಾಡಿದರು. ತಾಲೂಕಿನ ಮಾರಸಂದ್ರ ರಂಗನಹಟ್ಟಿಯಲ್ಲಿ ಇತ್ತೀಚೆಗೆ ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟವರ ಮನೆಗೆ ಗುರುವಾರ ದಾಬಸ್​ಪೇಟೆ ಒಳಕಲ್​ ಮಠದ ಬಸವರಮಾನಂದ ಸ್ವಾಮೀಜಿ ಅವರೊಂದಿಗೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.
ಇಂಥ ಅವಡಗಳು ನಡೆಯದಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಬಹಳ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಈ ರ್ದಟನೆ ನಡೆದಿದೆ. ಗ್ರಾಮೀಣ ಭಾಗದಲ್ಲಿ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಕೆಲಸ ಸ್ಥಳಿಯಮಟ್ಟದಲ್ಲಿ ಮಾಡಬೇಕು ಎಂದರು.


ದಾಬಸ್​ಪೇಟೆ ಒಳಕಲ್​ ಮಠದ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಇದು ಅತ್ಯಂತ ನೋವಿನ ಸಂಗತಿ. ಎರಡೂ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು. ಬ್ಲಾಕ್​ ಕಾಂಗ್ರೆಸ್​ ಅದ್ಯಕ್ಷ ದೇವರಾಜು, ಗ್ರಾಪಂ ಸದಸ್ಯ ಯೋಗೀಶ್​, ತಾಪಂ ಮಾಜಿ ಸದಸ್ಯ ಶ್ರೀನಿವಾಸ್​, ಮುಖಂಡರಾದ ತೆಲೋಕಿನಾಥ್​, ಜಯಣ್ಣ, ಮಂಜುನಾಥ್​ ಇದ್ದರು.