ಜಿಲ್ಲೆ

ಕಾರ್ಮಿಕ ಒಕ್ಕೂಟದ ಪದಾಧಿಕಾರಿಗಳು

Dharwada - Basavaraj Idli

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದಲ್ಲಿ ನಡೆಯಿತು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದುರಗಪ್ಪ ಚಿಕ್ಕತುಂಬಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಒಕ್ಕೂಟದ ಗೌರವಾಧ್ಯಕ್ಷರಾಗಿ ಎಸ್.ಪಿ. ಕರಿಸೋಮನಗೌಡರ, ಅಧ್ಯಕ್ಷರಾಗಿ ಶಿವಕುಮಾರ ಬಂಡಿವಡ್ಡರ, ಉಪಾಧ್ಯಕ್ಷರಾಗಿ ನಬೀರಸೂಲ ನದಾಫ, ವಾಸು ಲಮಾಣಿ, ಪ್ರಧಾನ ಕಾರ್ಯದರ್ಶಿಯಾಗಿ ದುರಗಪ್ಪ ಚಿಕ್ಕತುಂಬಳ, ಕಾರ್ಯದರ್ಶಿಯಾಗಿ ಮುಸ್ತಾಕಅಹ್ಮದ ನದಾ್, ಸಂಟನಾ ಕಾರ್ಯದರ್ಶಿಯಾಗಿ ಕುಬೇರ ಲಮಾಣಿ, ಸಹ ಕಾರ್ಯದರ್ಶಿಯಾಗಿ ಮಹ್ಮದ ರಸೂಲ ಶಿಗ್ಗಾಂವಿ, ಖಜಾಂಚಿಯಾಗಿ ಲಕ್ಷ್ಮಣ ಗುಡಾರದ ಆಯ್ಕೆಯಾದರು.

ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷರಾಗಿ ಶಿವಾನಂದ ಅಸೂಟಿ, ಕಾರ್ಯದರ್ಶಿಯಾಗಿ ರಾಕೇಶ ಗುಂಡೆ, ರಾಜ್ಯ ಸಮಿತಿ ಗೌರವ ಸದಸ್ಯರಾಗಿ ಅಬ್ದುಲ್ಲಾ ಶೇಖ್, ನಿಂಗಪ್ಪ ವಡ್ಡರ, ಜ್ಯೋತಿ ಪತ್ತಾರ, ಸದಾನಂದ ಹಿತ್ತಲಮನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.