ಸಿಂಧನೂರಿಲ್ಲಿ ಕಾರ್ಮಿಕ ಸಂಘಟನೆಗಳು ಬೈಕ್ ರ‌್ಯಾಲಿ ಮೂಲಕ ಪ್ರಚಾರಾಂದೋಲನ ನಡೆಸಿದವು. ಸಂಘಟನೆ ಪ್ರಮುಖರಾದ ಬಾಷುಮಿಯಾ, ನಾಗರಾಜ ಪೂಜಾರ್, ಯಂಕಪ್ಪ ಕೆಂಗಲ್, ಬಸವಂತರಾಯ ಕಲ್ಲೂರು, ಗೋಪಾಲಕೃಷ್ಣ ಇದ್ದರು. 
ಜಿಲ್ಲೆ

ಕಾರ್ಮಿಕ ಸಂಘಟನೆಗಳಿಂದ ಪ್ರಚಾರಾಂದೋಲನ

Kopala - Desk - Eraveni

ಸಿಂಧನೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು ಸೇರಿ ವಿವಿಧ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಜು.9ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಅಂಗವಾಗಿ ನಗರದಲ್ಲಿ ಕಾರ್ಮಿಕ ಸಂಘಟನೆಗಳಿಂದ ಮಂಗಳವಾರ ಪ್ರಚಾರಾಂದೋಲನ ನಡೆಯಿತು.

ನವ ಗುಲಾಮಗಿರಿಗೆ ತಳ್ಳಲಿರುವ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಕೆಲಸದ ಅವಧಿ ಹೆಚ್ಚಳ ಸೇರಿ ಕಾರ್ಮಿಕ ವಿರೋಧಿ ತಿದ್ದುಪಡಿ ಮಾಡುತ್ತಿರುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು.

ಕನಿಷ್ಠ 36 ಸಾವಿರ ರೂ. ವೇತನ, ಗುತ್ತಿಗೆ ಮುಂತಾದ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ, ಪಿಂಚಣಿ ಸೇರಿ ಕಲ್ಯಾಣ ಸೌಲಭ್ಯಗಳ ಜಾರಿಗೊಳಿಸಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ಖಾತ್ರಿಗಾಗಿ, ಬಲವಂತದ ಭೂಸ್ವಾಧೀನ ನಿಲ್ಲಬೇಕೆಂದು ಆಗ್ರಹಿಸಿದರು.

ಸಿಪಿಐ, ಸಿಪಿಐಎಂ, ಸಿಪಿಐ(ಎಂಎಲ್) ಲಿಬರೇಷನ್, ಎಐಟಿಯುಸಿ, ಎಐಸಿಸಿಟಿ, ಸಿಐಟಿಯು ಸೇರಿದಂತೆ ಇತರ ಕಾರ್ಮಿಕ ಸಂಘಟನೆಗಳಿಂದ ಬೈಕ್ ರ‌್ಯಾಲಿ ನಡೆಸಿ ಪ್ರಚಾರಾಂದೋಲನ ನಡೆಸಲಾಯಿತು. ಪ್ರಮುಖರಾದ ಬಾಷುಮಿಯಾ, ನಾಗರಾಜ ಪೂಜಾರ್, ಯಂಕಪ್ಪ ಕೆಂಗಲ್, ಬಸವಂತರಾಯ ಕಲ್ಲೂರು, ಗೋಪಾಲಕೃಷ್ಣ ಇತರರಿದ್ದರು.