ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ- ಕರ್ನಾಟಕ ಜಿಲ್ಲಾ ಸಮನ್ವಯ ಸಮಿತಿ ಪದಾಧಿಕಾರಿಗಳು ಕೊಪ್ಪಳದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಹೋರಾಟಗಾರರಾದ ಬಸವರಾಜ ಶೀಲವಂತರ, ಡಿ.ಎಚ್​.ಪೂಜಾರ, ಖಾಸಿಂ ಸರ್ದಾರ, ಸುಂಕಪ್ಪ, ನಾಗರಾಜ್​, ಸಂಜಯದಾಸ್​, ಬಸವರಾಜ ನರೆಗಲ್​,ಮಲ್ಲೇಶ್​ ಗೌಡ, ಶರಣು, ಭೀಮಸೇನ ಕಲಕೇರಿ, ಹನುಮಂತಪ್ಪ ಎಳನೀರು, ಗಾಳೆಪ್ಪ ಮುಂಗೋಲಿ ಇದ್ದರು. 
ಜಿಲ್ಲೆ

ಕಾರ್ಮಿಕ ವಿರೋಧಿ ನೀತಿ ಹಿಂಪಡೆಯಲಿ

Kopala - Raveendra V K

ಕೊಪ್ಪಳ: ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ವಾಪಸ್​ ಪಡೆಯುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ- ಕರ್ನಾಟಕ ಜಿಲ್ಲಾ ಸಮನ್ವಯ ಸಮಿತಿ ಪದಾಧಿಕಾರಿಗಳು ನಗರದ ಅಶೋಕ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಬಂಡವಾಳಶಾಹಿ ನೀತಿಗಳನ್ನು ಅನುಷ್ಠಾನ ಮಾಡುತ್ತಿದೆ. ಕೃಷಿ, ಕಾರ್ಮಿಕ ವಲಯದಲ್ಲಿ ಕಾಪೋರ್ರೇಟ್​ ಕಂಪನಿಗಳಿಗೆ ಅನುಕೂಲಕರ ಕಾಯ್ದೆ ತರುತ್ತಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನ, ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಕೈಯಿಂದ ಕೃಷಿ ಕಸಿಯುವ ಕೆಲಸವಾಗುತ್ತಿದೆ. ಕೈಗಾರಿಕೆ, ಹೆದ್ದಾರಿ ಹೆಸರಿನಲ್ಲಿ ಲವತ್ತಾದ ಭೂಮಿ ನಾಶವಾಗುತ್ತಿದೆ. ಬಂಡವಾಳಶಾಹಿಗಳನ್ನು ದೇಶ ಬಿಟ್ಟು ತೊಲಗಿಸಿ. ಕಾಪೋರ್ರೇಟ್​ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್​ ಖಾಸಗೀಕರಣ ತಡೆಯಿರಿ. ಕೃಷಿ ಭೂಮಿ ರೈತರಲ್ಲೇ ಉಳಿಸಿ. ಸ್ವಾಮಿನಾಥನ್​ ವರದಿಯಂತೆ ಉತ್ಪಾದನಾ ವೆಚ್ಚದ ಶೇ.50ರಷ್ಟು ಬೆಂಬಲ ಬೆಲೆ ಘೋಷಿಸಿ. ಶೈತ್ಯಾಗಾರ ನಿರ್ಮಿಸಿ. ಅಂತಾರಾಜ್ಯ ನೀರಾವರಿ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಿ. ಬರ, ನೆರೆ ಪರಿಹಾರಕ್ಕೆ ವೈಜ್ಞಾನಿಕ ಮೊತ್ತ ನಿಗದಿಪಡಿಸಿ. ವಯನಾಡು ದುರಂತ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ ಪುನರ್ವಸತಿ ಕಲ್ಪಿಸಿ. ಸಲ ಬೀಮಾ ವಿಮಾ ಯೋಜನೆಯಲ್ಲಿನ ಮೋಸ ತಡೆಯಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರರಾದ ಬಸವರಾಜ ಶೀಲವಂತರ, ಡಿ.ಎಚ್​.ಪೂಜಾರ, ಖಾಸಿಂ ಸರ್ದಾರ, ಸುಂಕಪ್ಪ, ನಾಗರಾಜ್​, ಸಂಜಯದಾಸ್​, ಬಸವರಾಜ ನರೆಗಲ್​,ಮಲ್ಲೇಶ್​ ಗೌಡ, ಶರಣು, ಭೀಮಸೇನ ಕಲಕೇರಿ, ಹನುಮಂತಪ್ಪ ಎಳನೀರು, ಗಾಳೆಪ್ಪ ಮುಂಗೋಲಿ, ಮಹಾದೇವಪ್ಪ, ಇಂದು, ಪ್ರಗತಿ ಗಂಗಮ್ಮ, ನೀಲಮ್ಮ ಇತರರಿದ್ದರು.