ಕಾರ್ಮಿಕ ದಿನಾಚರಣೆಯ ನಿಮಿತ್ತ ಔರಾದ್ ತಾಲೂಕಿನ ಸಂತಪುರನ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾರ್ಮಿಕರನ್ನು ಸನ್ಮಾನಿಸಿ, ಮತದಾನ ಜಾಗೃತಿ ಮೂಡಿಸಲಾಯಿತು. ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಶಿವಪುತ್ರ, ವನದೇವಿ, ಪ್ರಿಯಾಂಕ, ಕಲ್ಲಪ್ಪ ಬುಟ್ಟೆ, ರಾಜಕುಮಾರ, ಸುಧಾ ಮೀನಾಕ್ಷಿ ಸ್ವಾಮಿ ಇತರರಿದ್ದರು. 
ಜಿಲ್ಲೆ

ಕಾರ್ಮಿಕರ ಶ್ರಮ ಬಹು ದೊಡ್ಡದ್ದು

ರಾಜು ಯಮಕನಮರಡಿ

ಔರಾದ್: ಸಮಾಜದಲ್ಲಿನ ಪ್ರತಿಯೊಂದು ಕೆಲಸ ಸುಸೂತ್ರವಾಗಿ ನಡೆಯಬೇಕಾದರೆ ಅದಕ್ಕೆ ಕಾರ್ಮಿಕರ ಶ್ರಮ ಬಹು ದೊಡ್ಡದಾಗಿದೆ ಎಂದು ಪ್ರಾಚಾರ್ಯ ನವಿಲಕುಮಾರ ಉತ್ಕಾರ ಹೇಳಿದರು.

ಕಾರ್ಮಿಕರ ದಿನಾಚರಣೆಯ ನಿಮಿತ್ತ ಸಂತಪುರನ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಸನ್ಮಾನ ಮತ್ತು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರ ದೇಶದ ಬಹುದೊಡ್ಡ ಆಸ್ತಿ, ಅವರಿಂದಲೇ ಎಲ್ಲ ಕೆಲಸಗಳು ಸಾಧ್ಯವಾಗುತ್ತವೆ. ಕೇವಲ ಕಾರ್ಮಿಕರ ದಿನಾಚರಣೆ ನಿಮಿತ್ತ ಅವರನ್ನು ಸನ್ಮಾನಿಸದೇ ಪ್ರತಿ ದಿನವು ಅವರ ಕಾರ್ಯವನ್ನು ಗೌರವಿಸಬೇಕು ಎಂದರು.

ಉಪನ್ಯಾಸಕ ಕಲ್ಲಪ್ಪ ಬುಟ್ಟೆ ಮಾತನಾಡಿದರು. ಶಿವಪುತ್ರ, ವನದೇವಿ ಎಕ್ಕೆಳ್ಳೆ, ಪ್ರಿಯಾಂಕ, ರಾಜಕುಮಾರ, ಸುಧಾ ಕೌಟುಗೆ, ಮೀರ್ತಾಬಾಯಿ, ಮೀನಾಕ್ಷಿ ಸ್ವಾಮಿ ಇತರರಿದ್ದರು. ಕಾಲೇಜಿನ ಡಿ ಕಾರ್ಮಿಕರನ್ನು ಸನ್ಮಾನಿಸಲಾಯಿತು.