ಜಿಲ್ಲೆ

ಪ್ರಯೋಗಶಾಲೆ ತಂತ್ರಜ್ಞರ ಕೊರತೆ

ಎ. ಆರ್. ರಘುರಾಮ

 ರಕ್ತ, ಕಫ ಮಾದರಿ ಪರೀಕ್ಷೆಗೆ ಪರದಾಟ

ಸಿ.ಜಿ ಪುನೀತ್ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಪ್ರಯೋಗಶಾಲೆ ತಂತ್ರಜ್ಞರ ಕೊರತೆ ಕಾಡುತ್ತಿದೆ. ಸಿಬ್ಬಂದಿ ಕೊರತೆಯಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮೀಣ ಭಾಗದ ಹಲವು ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಶಾಲೆ ತಂತ್ರಜ್ಞರ (ಲ್ಯಾಬ್ ಟೆಕ್ನೀಷಿಯನ್)ಕೊರತೆಯಿಂದಾಗಿ ಜ್ವರ, ಕೆಮ್ಮು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚುವ ರಕ್ತ, ಮೂತ್ರ, ಮಲ, ಕಫ ಇತ್ಯಾದಿ ಪರೀಕ್ಷೆ ಮಾಡಿಸಲು ಖಾಸಗಿ ಲ್ಯಾಬ್, ಡಯಗ್ನೋಸ್ಟಿಕ್ ಸೆಂಟರ್‌ಗಳಿಗೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಭರ್ತಿಯಾಗದ ಕಾಯಂ ಹುದ್ದೆಗಳು

ಪಿರಿಯಾಪಟ್ಟಣ ತಾಲೂಕಿನ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಪ್ರಮುಖವಾಗಿ ಸುಮಾರು ಹನ್ನೊಂದಕ್ಕೂ ಹೆಚ್ಚು ಲ್ಯಾಬ್ ಟೆಕ್ನೀಷಿಯನ್ ಹುದ್ದೆಗಳು ಖಾಲಿ ಇವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 2, ಕಿರಿಯ ಹಾಗೂ ಹಿರಿಯ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ನೇಮಕಾತಿ ಆಗಿಲ್ಲ. ಸದ್ಯ ಆಸ್ಪತ್ರೆಯ ಬೇರೆ ವಿಭಾಗದ ಒಬ್ಬರನ್ನು ಲ್ಯಾಬ್ ಸೇವೆಗೆ ನಿಯೋಜನೆ ಮಾಡಲಾಗಿದೆ. ತಾಲೂಕಿನ ಹಿಟ್ಟನೆಹೆಬ್ಬಾಗಿಲು, ಬೆಟ್ಟದಪುರ, ಹಲಗನಹಳ್ಳಿ, ಕಣಗಾಲು, ಚಿಕ್ಕನೇರಳೆ, ರಾವಂದೂರು, ಕಿತ್ತೂರು, ದೊಡ್ಡ ಬ್ಯಾಲಾಳು, ಕಂಪಲಾಪುರ, ಬೈಲಕುಪ್ಪೆ, ಹಬಟೂರು ಗ್ರಾಮಗಳ ಆರೋಗ್ಯ ಕೇಂದ್ರಗಳಲ್ಲಿಯೂ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗಳು ಅನೇಕ ವರ್ಷದಿಂದ ಖಾಲಿ ಇದೆ. ಚಪ್ಪರದಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ

ಲ್ಯಾಬ್ ಟೆಕ್ನೀಷಿಯನ್ ಇಲಾಖೆಯ ಆದೇಶದ ಮೇರೆಗೆ ವಾರದಲ್ಲಿ ಒಂದೆರೆಡು ದಿನ ಬೇರೆ ಬೇರೆ ಆರೋಗ್ಯ ಕೇಂದ್ರಗಳಲ್ಲಿ ತೆರಳಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪಲಾಪುರ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರು ಗುತ್ತಿಗೆ ಆಧಾರದ ಮೇರೆಗೆ ನಿಯೋಜನೆಗೊಂಡಿದ್ದಾರೆ. ಕಾಯಂ ಹುದ್ದೆ ಹಾಗೇ ಖಾಲಿಯಲ್ಲಿದೆ. ಕೊಪ್ಪ ಆರೋಗ್ಯ ಕೇಂದ್ರದಲ್ಲಿರುವ ಕಾಯಂ ಲ್ಯಾಬ್ ಟೆಕ್ನೀಷಿಯನ್ ವಾರಕ್ಕೆ ಒಂದು ದಿನ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಉಳಿದ ದಿನದಂದು ರೋಗಿಗಳು ಬೇರೆಡೆ (ಖಾಸಗಿ ಲ್ಯಾಬ್‌ಗೆ)ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.