ಜಿಲ್ಲೆ

ಸಚಿವ ಸಂತೋಷ ಲಾಡ್ ಕಿಮ್ಸ್​ಗೆ ದಿಢೀರ್ ಭೇಟಿ

ಮರಿದೇವ ಹೂಗಾರ

ಹುಬ್ಬಳ್ಳಿ: ಕಾರ್ವಿುಕ ಸಚಿವ ಸಂತೋಷ ಲಾಡ್ ಹುಬ್ಬಳ್ಳಿಯ ಕಿಮ್ಸ್​ಗೆ ಸೋಮವಾರ ದಿಢೀರ್ ಭೇಟಿ ನೀಡಿದರು. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಕಿಡಿಯಾದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು. ವಿವಿಧ ವಾರ್ಡ್​ಗಳಿಗೆ ತೆರಳಿದ ಲಾಡ್, ರೋಗಿಗಳು ಮತ್ತವರ ಸಂಬಂಧಿಕರ ಜತೆಗೆ ರ್ಚಚಿಸಿದರು. ಆಸ್ಪತ್ರೆಯಲ್ಲಿ ಹೇಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೋಗಿಗಳಿಂದ ಮಾಹಿತಿ ಪಡೆದರು