ಮೂರುಸಾವಿರಮಠದ ಲಿಂ. ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಷಟ್‌ಸ್ಥಲ ಧ್ವಜಾರೋಹಣವನ್ನು ಶಿವಮೂರ್ತೇಶ್ವರ ಮಠದ ಶಾಂತವೀರ ಶ್ರೀ ನೆರವೇರಿಸಿದರು. ಪ್ರಭುನೀಲಕಂಠ ಸ್ವಾಮೀಜಿ, ಡಾ. ಮಹಾಂತಯ್ಯ ಶಾಸ್ತ್ರಿ, ಡಾ. ಸಿ.ಎಸ್. ಸಾಧುನವರ, ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ ಇತರರು ಇದ್ದರು. 
ಜಿಲ್ಲೆ

ಲಿಂ. ಗಂಗಾಧರ ಶ್ರೀಗಳ ಕೊಡುಗೆ ಅಪಾರ

ಬೈಲಹೊಂಗಲ: ನಾಡಿನ ಶಿಕ್ಷಣ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಲಿಂ. ಗಂಗಾಧರ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು.

ಪಟ್ಟಣದ ಶಾಖಾ ಮೂರುಸಾವಿರ ಮಠದ ಲಿಂ. ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ಲಿಂ. ಗಂಗಾಧರ ಸ್ವಾಮೀಜಿಗಳ 11ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಬುಧವಾರ ಜರುಗಿದ ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಗಳು ನಾಡಿನ ಜನತೆಗೆ ಆಧ್ಯಾತ್ಮಿಕತೆಯ ಸಾರವನ್ನು ಉಣಬಡಿಸುತ್ತ, ಸಮಾಜ ಸುಧಾರಣೆಗೆ ಶ್ರಮಿಸಿದ್ದು, ಅವೀಸ್ಮರಣಿಯ ಎಂದರು. ಸಾನ್ನಿಧ್ಯ ವಹಿಸಿದ್ದ ರಾಮದುರ್ಗ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿದರು.

ಡಾ. ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ, ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಸಿ.ಎಸ್. ಸಾಧುನವರ, ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಪಿಎಸ್‌ಐ ಎಂ.ಎಸ್. ಹೂಗಾರ, ಸಂಸ್ಥೆಯ ನಿರ್ದೇಶಕ ಜಿ.ಎಸ್. ಹೂಲಿ, ಬಸವಪ್ರಭು ಬೆಳಗಾವಿ, ಷಣ್ಮುಖಪ್ಪ ಸಿದ್ನಾಳ, ಮಡಿವಾಳಪ್ಪ ಬೊಳೆತ್ತಿನ, ನಾಗಪ್ಪ ಮಾಕಿ, ಶಂಕರೆಪ್ಪ ತುರಮರಿ ಇದ್ದರು. ಎಸ್.ಆರ್. ಕಲಹಾಳ ಸ್ವಾಗತಿಸಿದರು. ಎನ್.ಎಸ್. ಚಿಲಮೂರ ನಿರೂಪಿಸಿದರು.