ಜಿಲ್ಲೆ

ಕೆವೈಸಿ ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಕೆವೈಸಿ ಮಾಹಿತಿ ಪಡೆದ ಅಪರಿಚಿತರು, ಸತ್ತೂರಿನ ವಿದ್ಯಾರ್ಥಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಆನ್​ಲೈನ್ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ.
ಆರ್ಯ ಎನ್ನುವ ವಿದ್ಯಾರ್ಥಿ ಬ್ಯಾಂಕ್ ಕೆವೈಸಿ ಅಪ್​ಡೇಟ್ ಮಾಡುತ್ತಿದ್ದಾಗ ಅಪರಿಚಿತರು ವಾಟ್ಸ್​ಆಪ್​ಗೆ ಲಿಂಕ್ ಕಳುಹಿಸಿದ್ದಾರೆ. ಲಿಂಕ್ ಓಪನ್ ಮಾಡಿ ಕೆವೈಸಿ ಅಪ್​ಡೇಟ್ ಮಾಡಲು ಹೋದಾಗ ಹಂತ ಹಂತವಾಗಿ ಒಟ್ಟು 2,01,791 ರೂ. ಆರ್ಯ ಖಾತೆಯಿಂದ ವರ್ಗಾಯಿಸಿಕೊಂಡಿದ್ದಾರೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.