ಜಿಲ್ಲೆ

ಕವಿವ ಸಂಘದ ಚುನಾವಣಾ ವೇಳಾಪಟ್ಟಿ ಬಿಡುಗಡೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮುಂದಿನ 3 ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಲಿದ್ದು, ಚುನಾವಣಾಧಿಕಾರಿ ಸಿ.ಎಸ್. ನೇಗಿನಹಾಳ ವೇಳಾಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಾಧ್ಯಕ್ಷ, ಕೋಶಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿ ಸಾಮಾನ್ಯ ಸದಸ್ಯರು 7, ಎಸ್‌ಸಿ/ಎಸ್‌ಟಿ 1 ಹಾಗೂ ಓರ್ವ ಮಹಿಳಾ ಪ್ರತಿನಿಧಿಗಳ ಆಯ್ಕೆಗೆ ಮೇ 25ರಂದು ಚುನಾವಣೆ ಜರುಗಲಿದೆ.

9ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. 13ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 14ರ ಸಂಜೆ 4.30ರಿಂದ 7ರವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. 16ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. 17ರಂದು ಅಂತಿಮವಾಗಿ ಕಣದಲ್ಲಿದ್ದವರ ಪಟ್ಟಿ ಪ್ರಕಟವಾಗಲಿದೆ. 25ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಸಂಘದ ಕಟ್ಟಡಗಳಲ್ಲಿ ಮತದಾನ ನಡೆಯಲಿದೆ. 26ರಂದು ಬೆಳಗ್ಗೆ 9ರಿಂದ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುವುದು. ಸಂಘದ ಸದಸ್ಯತ್ವ ಪಡೆದು 3 ವರ್ಷ ಪೂರ್ಣಗೊಂಡ ಸದಸ್ಯರು ಚುನಾವಣೆಗೆ ಸ್ಪಽðಸಲು ಅವಕಾಶವಿದೆ ಎಂದು ಚುನಾವಣಾಧಿಕಾರಿ ಸಿ.ಎಸ್. ನೇಗಿನಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.