ಗದಗ ತಾಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿದಿದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಪಿ.ಕೆ.ಹೊಸಮನಿ ಉದ್ಘಾಟಿಸಿದರು. ರಾಜೇಶ್ವರಿ ಚಿನಿವಾಲರ, ಸುಧಾ ಮಂಕಣಿ ಇತರರು ಇದ್ದರು. 
ಜಿಲ್ಲೆ

ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್​ಬಿಐ, ಎಎಸ್​ಎ್​ ನಿರ್ದೇಶಕ ಪಿ.ಕೆ.ಹೊಸಮನಿ, ಸಾಲು ಮರದ ತಿಮಕ್ಕನನ್ನು ಮಾದರಿಯಾಗಿ ಇಟ್ಟುಕೊಂಡು ಎಲ್ಲರೂ ಸಸಿಯನ್ನು ನೆಟ್ಟು ಕಾಪಾಡಬೇಕು. ಗಿಡಮರಗಳಿಂದ ಗಾಳಿ, ನೀರು ಸಿಗುತ್ತದೆ. ನಿಸರ್ಗವನ್ನು ಕಲುಷಿತಗೊಳಿಸಬಾರದು ಎಂದು ತಿಳಿಸಿದರು.
ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾಲರ ಮಾತನಾಡಿ, ನೈಸಗಿರ್ಕ ಸಂಪತ್ತನ್ನು ಬೆಳಸುವುದು ಹಾಗೂ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಈ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರ ಸಂರಣೆ ಮಾಡಬೇಕು. ನಿಸರ್ಗ ಉಚಿತವಾಗಿ ನೀಡುವ ಕುಡಿಯುವ ನೀರನ್ನು ಖರೀದಿಸಿ ಕುಡಿಯುತ್ತಿರುವ ಅನಿವಾರ್ಯತೆ ಸೃಷ್ಟಿ ಆಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಉಸಿರಾಡುವ ಗಾಳಿಯನ್ನೂ ಬಾಟಲಿಯಲ್ಲಿ ತುಂಬಿಕೊಂಡು ಇಟ್ಟುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಈಗಲೇ ಎಚ್ಚೆತ್ತು ನಾವೆಲ್ಲರೂ ಹೆಚ್ಚು ಗಿಡಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು. ಕ
ಅಧ್ಯತೆ ವಹಿಸಿದ್ದ ಡಾ. ಸುಧಾ ಮಂಕಣಿ ಮಾತನಾಡಿ, ಜುಲೈ ತಿಂಗಳಿನಲ್ಲಿ 1 ಸಾವಿರ ಗಿಡಗಳನ್ನು ನಡೆವ ಗುರಿ ಹೊಂದಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ತಲಾ 10 ಗಿಡಗಳನ್ನು ನೆಟ್ಟು ದಿನಾಚರಣೆಯನ್ನು ಸಾರ್ಥಕತೆ ಮಾಡಬೇಕು. ಏರುತ್ತಿರುವ ತಾಪಮಾನ, ಹವಾಮಾನ ವೈಪರೀತ್ಯ, ಮಳೆಯ ಕೊರತೆಯನ್ನು ನೀಗಿಸಲು ನಾವೆಲ್ಲರೂ ಗಿಡಗಳನ್ನು ಹಚ್ಚೋಣ ಎಂದು ತಿಳಿಸಿದರು.
ಹೇಮಾವತಿ ಹಿರೇಗೌಡರ, ಎನ್​. ಎಚ್​. ಭಂಡಿ, ಡಾ. ವಿನಾಯಕ ನಿರಂಜನ ಹಲವರು ಇದ್ದರು.