ಜಿಲ್ಲೆ

300 ಕೋಟಿ ರೂ. ಸಬ್ಸಿಡಿ ವಿತರಣೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ)ದಡಿ ದೇಶದ ಸೇವಾ ವಲಯದ 11480 ಫಲಾನುಭವಿಗಳಿಗೆ 300 ಕೋಟಿ ರೂ. ಮಾರ್ಜಿನ್ ಮನಿ (ಸಬ್ಸಿಡಿ) ವಿತರಿಸಿದೆ.

ನವದೆಹಲಿಯ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ಮನೋಜಕುಮಾರ ಹಾಗೂ ಅವರ ತಂಡವು ಮಂಗಳವಾರ ವರ್ಚುವಲ್ ವೇದಿಕೆಯಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮನೋಜಕುಮಾರ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸ್ವಾವಲಂಬಿ ಹಾಗೂ ದೂರದೃಷ್ಟಿಯ ಭಾರತವನ್ನು ಗುರುತಿಸಲಾಗುತ್ತಿದೆ. ಪಿಎಂಇಜಿಪಿ ಕೇವಲ ಆರ್ಥಿಕ ನೆರವು ನೀಡುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ಲಕ್ಷಾಂತರ ಯುವಕರು, ಮಹಿಳೆಯರು ಮತ್ತು ಕುಶಲಕರ್ವಿುಗಳನ್ನು ಸ್ವ ಉದ್ಯೋಗದೊಂದಿಗೆ ಸಂರ್ಪಸುವ ಸಾಮಾಜಿಕ ಚಳವಳಿಯಾಗಿಯೂ ಮಾರ್ಪಟ್ಟಿದೆ ಎಂದರು.

ಈ ಯೋಜನೆ ಪ್ರಾರಂಭವಾದಾಗಿನಿಂದ 2024-25ರ ಆರ್ಥಿಕ ವರ್ಷದವರೆಗೆ 10,18, 185 ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸಲಾಗಿದ್ದು, ಇವರಿಗೆ ಕೇಂದ್ರ ಸರ್ಕಾರದಿಂದ 73,348 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಇದಕ್ಕೆ ವಿರುದ್ಧವಾಗಿ ಫಲಾನುಭವಿಗಳಿಗೆ 27,166 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಇಲ್ಲಿಯವರೆಗೆ ದೇಶಾದ್ಯಂತ 90 ಲಕ್ಷಕ್ಕೂ ಹೆಚ್ಚು ಜನರು ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಪಡೆದಿದ್ದಾರೆ. ಇದು ದೇಶದ ಪರಿಣಾಮಕಾರಿ ಸ್ವ-ಉದ್ಯೋಗ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಆಯೋಗದ ಸಿಐಒ ರೂಪಾ ರಾಶಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.