ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಉದ್ಘಾಟಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಪತ್ರಕರ್ತರಾದ ಬಸವರಾಜ ತಿಪ್ಪಣ್ಣವರ, ಎಂ.ಸಾದಿಕ ಅಲಿ, ಹರೀಶ ಎಚ್​.ಎಸ್​., ಜಿ.ಎಸ್​.ಗೋನಾಳ, ಹನುಮಂತ ಹಳ್ಳಿಕೇರಿ, ರಾಜು ಬಿ.ಆರ್​. ಇದ್ದರು. 
ಜಿಲ್ಲೆ

ಆರೋಗ್ಯ ವೃದ್ಧಿಗೆ ಕ್ರೀಡೆ ಮದ್ದು, ವಿಠ್ಠಲ ಜಾಬಗೌಡರ ಅಭಿಮತ

kuwj sports in koppal cricket sports AD Vittal jabagoudar

ಕೊಪ್ಪಳ: ದೈಹಿಕ ಸದೃಢೆತೆಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೆಯುಡಬ್ಲೂಜೆಯಿಂದ ಹಮ್ಮಿಕೊಂಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಪತ್ರಕರ್ತರು ಸದಾ ಒತ್ತಡದಲ್ಲಿರುತ್ತೀರಿ. ಸಮಯ ಸಿಕ್ಕಾಗ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಿ. ನಿತ್ಯ ಒಂದಿಷ್ಟು ಸಮಯ ಕ್ರೀಡೆಗಾಗಿ ಮೀಸಲಿಡಿ. ಕ್ರೀಡಾಂಗಣ ಅಭಿವೃದ್ಧಿಗೆ ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಮಾತನಾಡಿ, ಆರೋಗ್ಯ ಪೂರ್ಣ ಸಮಾಜ ನಿಮಾರ್ಣಕ್ಕೆ ಕ್ರೀಡೆ ಸಹಾಕಾರಿಯಾಗಿದೆ ಎಂದರು.

ಬಾಹುಬಲಿ ಮತ್ತು ಚಕ್ರವರ್ತಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಕ್ರವರ್ತಿ ತಂಡ ಜಯಶಾಲಿಯಾಯಿತು. ನಿರ್ಣಾಯಕರಾದ ಬಸವರಾಜ ಹನುಮಸಾಗರ, ಶರಣಬಸವಸ್ವಾಮಿ, ಪತ್ರಕರ್ತರಾದ ಬಸವರಾಜ ತಿಪ್ಪಣ್ಣವರ, ಎಂ.ಸಾದಿಕ ಅಲಿ, ಹರೀಶ ಎಚ್​.ಎಸ್​., ಜಿ.ಎಸ್​.ಗೋನಾಳ, ಹನುಮಂತ ಹಳ್ಳಿಕೇರಿ, ರಾಜು ಬಿ.ಆರ್​., ಎನ್​.ಎಂ.ದೊಡ್ಡಮನಿ, ಮಂಜುನಾಥ ಗೊಂಡಬಾಳ ಇತರರಿದ್ದರು.