ಗೋಣಿಕೊಪ್ಪ: ಕುಟ್ಟ ಚೆಕ್ ಪೋಸ್ಟ್‌ಗೆ ಶನಿವಾರ ದಿಢೀರ್ ಭೇಟಿ ನೀಡಿದ ಪೊನ್ನಂಪೇಟೆ ತಹಸೀಲ್ದಾರ್ ಮೋಹನ್ ಕುಮಾರ್ ಅವರು ವ್ಯವಸ್ಥೆ ಪರಿಶೀಲಿಸಿದರು. ಸಿಬ್ಬಂದಿ ಕಾರ್ಯ ನಿರ್ವಹಣೆ, ವಾಹನ ತಪಾಸಣೆ ಪ್ರಕ್ರಿಯೆಗಳನ್ನು ಗಮನಿಸಿದರು.
ಕೊಡಗಿನ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಸಿಬ್ಬಂದಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲ, ಮೂಲ ಸೌಕರ್ಯ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಗಳು ಹರಿಡಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಪರವಾಗಿ ತಹಸೀಲ್ದಾರ್ ಮೋಹನ್ ಕುಮಾರ್ ಖುದ್ದು ಪರಿಶೀಲನೆ ನಡೆಸಿದರು.
ವ್ಯವಸ್ಥೆ ಮಾಡಲಾಗಿದೆ:
ತಾತ್ಕಾಲಿಕವಾಗಿ ಒಬ್ಬ ಸಿಬ್ಬಂದಿ, ಮತ್ತೊಬ್ಬ ಅಧಿಕಾರಿಯನ್ನು ಇಲ್ಲಿಗೆ ನೇಮಕಗೊಳಿಸಲಾಗಿದೆ. ಅಗತ್ಯ ಪೊಲೀಸ್ ಸಿಬ್ಬಂದಿಯನ್ನೂ ನೀಡಲಾಗಿದೆ. ಕುಟ್ಟ ಗಡಿಭಾಗದಲ್ಲಿ ತಪಾಸಣೆ ಕಾರ್ಯ ಸುಗಮವಾಗಿ ನಡೆಯುವಂತೆ ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಈ ಸಂದರ್ಭ ‘ವಿಜಯವಾಣಿ’ ಗೆ ಹೇಳಿದರು.
06 ಜಿಕೆಪಿ 04:
ಕುಟ್ಟ ಚೆಕ್ ಪೋಸ್ಟ್‌ಗೆ ಶನಿವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುತ್ತಿರುವ ಪೊನ್ನಂಪೇಟೆ ತಹಸೀಲ್ದಾರ್ ಮೋಹನ್ ಕುಮಾರ್.