ಜಿಲ್ಲೆ

ಕಮ್ಮಾರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ತಹಸೀಲ್ದಾರ್ ಎಂ.ಸಿದ್ದೇಶಗೆ ತಾಲೂಕು ಸಂಘದ ಸದಸ್ಯರು ಮನವಿ

ಕುಷ್ಟಗಿ: ಕಮ್ಮಾರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಎಂ.ಸಿದ್ದೇಶಗೆ ತಾಲೂಕು ಕಮ್ಮಾರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಶುಕ್ರವಾರ ಮನವಿ ಸಲ್ಲಿಸಿದರು.

ಕಮ್ಮಾರ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ಕಮ್ಮಾರಿಕೆ ವೃತ್ತಿ ಅವಲಂಬಿಸಿರುವ ಕುಟುಂಬಗಳು ಸಂಕಷ್ಟದಲ್ಲಿವೆ. ಸಮುದಾಯದ ಅಭಿವೃದ್ಧಿಗೆ ಸರ್ಕಾರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಬೇಕಿದೆ. ಸಮುದಾಯದ ಕಾರ್ಯಕ್ರಮ ಆಯೋಜಿಸಲು ಕಮ್ಮಾರ ಕಲ್ಲಯ್ಯನವರ ಹೆಸರಿನಲ್ಲಿ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಕಮ್ಮಾರಿಕೆಗೆ ಸಂಬಂಧಿಸಿ ಸಾಮಗ್ರಿಯನ್ನು ಸಬ್ಸಿಡಿ ದರದಲ್ಲಿ ವಿತರಿಸಬೇಕು. ವಿವಿಧ ವಸತಿ ಯೋಜನೆಗಳಲ್ಲಿ ಕಮ್ಮಾರ ಸಮುದಾಯ ಪರಿಗಣಿಸಬೇಕು. ಸಮುದಾಯದ ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗ ಆರಂಭಿಸಲು ಸಹಾಯಧನ ನೀಡಬೇಕು. ಕಮ್ಮಾರ ಸಮುದಾಯಕ್ಕೂ ವಿಶೇಷ ಪ್ಯಾಕೇಜ್ ಘೋಷಿಸಿ ಪರಿಹಾಧನ ವಿತರಿಸಬೇಕೆಂದು ಆಗ್ರಹಿಸಿದರು.

ಸಮುದಾಯದ ಅಧ್ಯಕ್ಷ ಪರಶುರಾಮಪ್ಪ ಕಮ್ಮಾರ, ಉಪಾಧ್ಯಕ್ಷರಾದ ವಿಶ್ವನಾಥ ಕಮ್ಮಾರ, ಶಿವಕುಮಾರ ಕಮ್ಮಾರ, ಕಾರ್ಯದರ್ಶಿ ರಂಗನಾಥ ಕಮ್ಮಾರ, ಖಜಾಂಚಿ ಮಂಜುನಾಥ ಕಮ್ಮಾರ, ಸದಸ್ಯರಾದ ಶರಣಪ್ಪ ಕಮ್ಮಾರ, ಯಮನೂರಪ್ಪ ಕಮ್ಮಾರ, ಸುನಿಲ್ ಕಮ್ಮಾರ, ದ್ಯಾಮೇಶ ಕಮ್ಮಾರ, ವೀರೇಶ ಕಮ್ಮಾರ, ಕಳಕಪ್ಪ ಕಮ್ಮಾರ, ಮೌನೇಶ ಕಮ್ಮಾರ ಇತರರು ಇದ್ದರು.